Skip to main content

ಮುಕ್ತಾ ಶಿಖರ - ಹಿಮಾಲಯದಲ್ಲಿನ ಒಂದು ನವೀನ ಚಾರಣ ಮಾರ್ಗ.


ಮುಕ್ತಾ ಶಿಖರ - ಹಿಮಾಲಯದಲ್ಲಿನ ಒಂದು ನವೀನ ಚಾರಣ ಮಾರ್ಗ.

ಈ ಚಾರಣವು ಚಳಿಗಾಲದ ಕೇದಾರಕಾಂತ, ದಯಾರ ಬುಗ್ಯಾಲ್, ಹಾಗೂ ಚಂದ್ರಶಿಲಾ ಗುಂಪಿಗೆ ಸೇರಿದ ಉತ್ತರಾಖಂಡದಲ್ಲಿನ ನೂತನ ಚಾರಣ ಮಾರ್ಗ. ಇದು ಒಂದು ಅತ್ಯಂತ ಸುಂದರ ಹಾಗೂ ಅದ್ಭುತವಾದ ಚಾರಣ ಮತ್ತು ಈ ಚಾರಣದಲ್ಲಿ ಚಾರಣಿಗರನ್ನು ಮೋಡಿಮಾಡುವ ಅರಣ್ಯಗಳು, ಹುಲ್ಲುಗಾವಲುಗಳು, ಭವ್ಯವಾದ ಪರ್ವತ ಶಿಖರಗಳ ನೋಟಗಳು ಮತ್ತು ಅತ್ಯಂತ ತೃಪ್ತಿಕರವಾದ ಶಿಖರಾರೋಹಣದಿಂದ ಕೂಡಿದ್ದು ಹಾಗೂ ಇದು ಸಂಪೂರ್ಣವಾಗಿ ನಿರ್ಜನವಾದದ್ದು. ಅದೇ ಮುಕ್ತಾ ಶಿಖರ.

ಬೇರೆ ಚಾರಣಗಳಂತಲ್ಲದೆ, ಇದು ಸ್ವಲ್ಪ ಕೆಳಮಟ್ಟದಿಂದ ಪ್ರಾರಂಭವಾಗುವುದು. ಹೀಗಾಗಿ ಇದು ಚಾರಣಿಗರು ಹಿಮಾಲಯದಲ್ಲಿನ ಸಂಪೂರ್ಣವಾಗಿ ಬೇರೆಯದೇ ಆದ ಕಾಡುಗಳನ್ನು ವೀಕ್ಷಿಸಲು ಅನುವು ಮಾಡಿಕೊಡುವುದು. ಉದಾಹರಣೆಗೆ, ಈ ಮಾರ್ಗದಲ್ಲಿ ಬಿದಿರಿನಿಂದ ಕೂಡಿದ ಕಾಡು ಒಂದು ವೈಶಿಷ್ಟ್ಯತೆಯಿಂದ ಕೂಡಿದ್ದು.

ಮೇಲೆ ಮೇಲೆ ಚಾರಣ ಮಾಡುತ್ತಿದ್ದಂತೆ ನಮಗೆ ರೋಡೋಡೆಂಡ್ರಾನ್, ಮ್ಯಾಪಲ್, ಪುರಾತನ ಓಕ್ ಹಾಗೂ ಪೈನ್ ವೃಕ್ಷಗಳು ಎದುರಾಗುವುದು. ಇಲ್ಲಿನ ಕಾಡುಗಳು ಅತ್ಯಂತ ದಟ್ಟವಾಗಿರುವುದು.

ಮತ್ತೊಂದು ವೈಶಿಷ್ಟ್ಯವೆಂದರೆ ಈ ಚಾರಣದಲ್ಲಿ ಸಂಪೂರ್ಣವಾಗಿ ಎರಡು ದಿನಗಳು ಕಾಡಿನಲ್ಲೇ ನಡೆಯಬೇಕು. ಬೇರೆ ಚಾರಣಗಳಲ್ಲಿ 3-4 ಘಂಟೆಗಳ ಕಾಡಿನ ನಡಿಗೆ ಇರುವುದು. ಇದರಲ್ಲಿನ ಲಾಭವೆಂದರೆ ಮರಗಳ ನೆರಳಿನಲ್ಲಿ ಚಾರಣ ಮಾಡುವುದು. ಇತ್ತೀಚಿನ ದಿನಗಳಲ್ಲಿ ಚಂದ್ರಶಿಲಾ ಚಾರಣ ಮಾರ್ಗವನ್ನು ಅರಣ್ಯ ಇಲಾಖೆಯವರು ಮುಚ್ಚಿರುವುದರಿಂದ ಮುಕ್ತಾ ಶಿಖರ ಚಾರಣವು ಅದಕ್ಕೆ ಸೂಕ್ತ ಬದಲಿ ಮಾರ್ಗವಾಗಿದೆ.

ಈ ಮಾರ್ಗವು ಸಂಪೂರ್ಣವಾಗಿ ವಿವಿಧ ವೃಕ್ಷಗಳಿಂದ ಕೂಡಿರುವುದರಿಂದ, ಮಾರ್ಗದಲ್ಲಿ 20 ವಿಧದ ಅನೇಕ ಜಾತಿಯ ಪಕ್ಷಿಗಳನ್ನು ವೀಕ್ಷಿಸಬಹುದು. ಅವುಗಳಲ್ಲಿ ಉತ್ತರಾಖಂಡದ ರಾಜ್ಯ ಪಕ್ಷಿ - ಭವ್ಯವಾದ ಹಿಮಾಲಯದ ಮೊನಲ್, ರಸೆಟ್ ಸ್ಪಾರೋಸ್, ಬ್ಲೂ ವಿಷಲಿಂಗ್ ತೃಷೆಸ್, ಹಿಮಾಲಯನ್ ಬುಲ್ ಬುಲ್, ಲೆಮೆನ್ ರಂಪಡ್ ವಾರ್ಬ್ಲ್ಯಾರ್ಸ್ ಇತ್ಯಾದಿ ಪಕ್ಷಿಗಳನ್ನು ನೋಡಲು ಅವಕಾಶ ಇರುವುದು. ಪಕ್ಷಿಪ್ರಿಯರಿಗೆ ಹಾಗೂ ಕವಿಗಳಿಗೆ ಇದು ಸ್ವರ್ಗ ಸಮಾನ ಚಾರಣ.

ಇದಲ್ಲದೇ ಅರಣ್ಯ ಮಾರ್ಗದಲ್ಲಿ ಚಾರಣಿಗರಿಗೆ ಬಾರ್ಕಿಂಗ್ ಡೀರ್, ಬ್ಲಾಕ್ ಬೇರ್ಸ್, ಬಾರಾಸಿಂಗ ಪ್ರಾಣಿಗಳನ್ನೂ ವೀಕ್ಷಿಸಬಹುದು.

ಚಳಿಗಾಲದಲ್ಲಿ ಕಾಡಿನ ಹಾದಿಯನ್ನು ಕ್ರಮಿಸಿ ಮೇಲೇರುತ್ತಿದ್ದಂತೆ ಮಾಯಾಲೋಕದಲ್ಲಿನಂತೆ ಹಿಮದಿಂದ ಕೂಡಿದ ವಿಶಾಲ ಪ್ರದೇಶವು ಧುತ್ತೆಂದು ನಿಮ್ಮ ಮುಂದೆ ತೆರೆದುಕೊಳ್ಳುವುದು. ಚಾರಣಿಗರಿಗೆ ಇದು ಒಂದು ಅದ್ಭುತವಾದ ಅನುಭವವನ್ನು ತಂದುಕೊಡುವುದು. ಅಲ್ಲದೇ ಇಲ್ಲಿಂದ ಹಿಮಾಲಯದಲ್ಲಿನ 6000 - 7000 ಮೀಟರ್ ಎತ್ತರದ ಅನೇಕ ಹಿಮ ಶಿಖರಗಳನ್ನು ವೀಕ್ಷಿಸಬಹುದು. ಅವುಗಳಲ್ಲಿ ಪ್ರಮುಖವಾದದ್ದು - jaonli (6632 ಮೀ), ಗಂಗೋತ್ರಿ ಶಿಖರ (6577 ಮೀ), ಕಾಲಾನಾಗ್ ಪರ್ವತ (6387 ಮೀ), ಬಂದರ್ ಪೂಂಚ್ -1 (6316 ಮೀ), ಹಾಗೂ ಬಂದರ್ ಪೂಂಚ್ - 2 (6102 ಮಿ), draupadi ka danda - 1 ಮತ್ತು 2 (5716 ಮತ್ತು 5670 ಮೀ), ಹಾಗೂ ನೀವು ಚಾರಣ ಮಾಡಬಹುದಾದ ನಾಗ್ ತಿಬ್ಬ ಶಿಖರ (3022 ಮೀ).

ಮುಕ್ತಾ ಶಿಖರ ಮಾರ್ಗವನ್ನು ಇದುವರೆಗೂ ಯಾರೂ ಕ್ರಮಿಸಿಲ್ಲ. ಹಾಗಾಗಿ ಇದು ಕಚ್ಚಾ ಮಾರ್ಗ ಹಾಗೂ ನೀವೇ ಮೊದಲಿಗರಾಗಬಹುದು.

ಚಾರಣದ ಸಂಕ್ಷಿಪ್ತ ಮಾರ್ಗದರ್ಶಿ :

ಮೊದಲನೇ ದಿನ : ಡೆಹ್ರಾಡೂನ್ ನಿಂದ ಗಂಗೋತ್ರಿ - ಕಾರಿನಲ್ಲಿ ಪಯಣ - 6-7 ಘಂಟೆ, 155 ಕಿ.ಮೀ- ತಲಪುವ ಎತ್ತರ - 4500 ಅಡಿ.

ಎರಡನೇ ದಿನ : ಗಂಗೋತ್ರಿಯಿಂದ ಕುಫ್ಹ್ಲಾನ್ ವರೆಗೂ 20 ನಿಮಿಷಗಳ ಕಾರಿನಲ್ಲಿನ ಪಯಣ, ನಂತರ ಶಿಲಾದುನಿ ಶಿಬಿರದವರೆಗೂ 4 ಘಂಟೆಗಳ 4 ಕಿ.ಮೀ ಚಾರಣ. ಆರೋಹಣ - 4500 ಇಂದ 6782 ಅಡಿ (2282 ಅಡಿ).


ಮೂರನೇ ದಿನ : ಶಿಲಾದುನಿಯಿಂದ ಚೈತಥಾರ್ ಶಿಬಿರದೆಡೆಗೆ - 5-6 ಘಂಟೆಗಳ 5 ಕಿ.ಮೀ ತೀವ್ರವಾದ ಆರೋಹಣದಿಂದ ಕೂಡಿದ (3000 ಅಡಿಗಳ ಎತ್ತರವನ್ನು ಏರಬೇಕು) ಮಾರ್ಗ. ಇದು ಅತಿ ಕಷ್ಟಕರವಾದ ಮಾರ್ಗ.

ನಾಲ್ಕನೇ ದಿನ : ಚೈತಥಾರ್ ನಿಂದ ಮುಕ್ತ ಸರೋವರದೆಡೆಗೆ - 1200 ಅಡಿ ಆರೋಹಣ - 4 ಘಂಟೆಗಳಿಂದ ಕೂಡಿದ 4 ಕಿ.ಮೀ ಚಾರಣ. ಮಾರ್ಗವು ಕ್ರಮೇಣ ಆರೋಹಣದಿಂದ ಕೂಡಿದ್ದು, ಮಧ್ಯಮ ದರ್ಜೆಯದು. ಈ ಪ್ರದೇಶದಿಂದ ಮೊತ್ತ ಮೊದಲಿಗೆ ನಮಗೆ ಬಂದರ್ ಪೂಂಚ್, ಕಾಲಾನಾಗ್ ಹಾಗೂ ನಾಗ ತಿಬ್ಬ ಶಿಖರಗಳನ್ನು ವೀಕ್ಷಿಸಬಹುದು.

ಐದನೇ ದಿನ : ಮುಕ್ತಾ ಸರೋವರದಿಂದ ಮುಕ್ತಾ ಶಿಖರವನ್ನು ತಲುಪಿ ನಂತರ ಕುವರಿ ಪ್ರದೇಶವನ್ನು 1000 ಅಡಿ ಏರಿ, 4100 ಅಡಿ ಇಳಿಯುವುದರಿಂದ ಕೂಡಿದ 6-7 ಘಂಟೆಗಳ 9 ಕಿ.ಮೀ ಹಾದಿಯನ್ನು ಕ್ರಮಿಸಬೇಕು. ಹಾದಿಯು ಮಧ್ಯಮ ದರ್ಜೆಯಿಂದ ಕೂಡಿದ್ದು, ಕೆಲವು ಕಡೆ ತೀವ್ರವಾದ ಆರೋಹಣ ಹಾಗೂ ಕ್ರಮೇಣ ಅವರೋಹಣದಿಂದ ಕೂಡಿರುವುದು. ಮುಕ್ತಾ ಶಿಖರದಲ್ಲಿ ಸಿಯಾರಿ ಸರೋವರವನ್ನು ವೀಕ್ಷಿಸಬಹುದು. ಈ ಸ್ಥಳದಿಂದ ಮೇಲೆ ತಿಳಿಸಿದ ಎಲ್ಲ ಶಿಖರಗಳನ್ನೂ 360 ಡಿಗ್ರಿ ಆಕಾಶದಲ್ಲಿ ನೋಡಬಹುದು.

ಆರನೇ ದಿನ : ಕುವರಿಯಿಂದ ಕುಫ್ಹ್ಲಾನ್ ಚಾರಣ, ಅನಂತರ ಡೆಹ್ರಾಡೂನ್ ಗೆ ಕಾರಿನಲ್ಲಿ ಪ್ರಯಾಣ - 4 ಘಂಟೆಗಳ 6 ಕಿ.ಮೀ ಚಾರಣ ಹಾಗೂ 6 ಘಂಟೆಗಳ 155 ಕಿ.ಮೀ ಕಾರಿನಲ್ಲಿನ ಪ್ರಯಾಣ.

ಚಾರಣ ಪ್ರಿಯರೆಲ್ಲರೂ ತಪ್ಪದೇ ಚಾರಣ ಮಾಡಲೇ ಬೇಕಾದ ಒಂದು ಅತಿ ಸುಂದರ ಚಾರಣ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - indiahikes.com
ಮಾಹಿತಿ ಸಂಗ್ರಹಣೆ : ಗುರುಪ್ರಸಾದ್ ಹಾಲ್ಕುರಿಕೆ




Comments

Popular posts from this blog

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು ಏಪ್ರಿಲ್ 22 ರಂದು ಸ್ಯಾನ್ ಫ್ರಾನ್ಸಿಸ್ಕೊ   ವಿಮಾನದಲ್ಲಿ ಬಂದು ಅಲ್ಲಿಂದ 40 ಮೈಲಿ ದೂರದ ಸನ್ನಿವೇಲ್ ನಗರಕ್ಕೆ ಬಂದು ನನ್ನ ಮಗನ ಮನೆಗೆ ತಲುಪಿದ ನಂತರ ಎರಡು ದಿನ ವಿಶ್ರಾ o ತಿಯ ನಂತರ ಶನಿವಾರದಂದು ನನ್ನನ್ನು   ನನ್ನ ಮಗನು ಇಲ್ಲಿಂದ 40 ಮೈಲಿ ದೂರದಲ್ಲಿರುವ ಲ್ಯಾಂಡ್ ಆಫ್ ಮೆಡಿಸನ್ ಬುದ್ಧ ಎಂಬ ಸುಂದರ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದನು . ಅಲ್ಲಿಗೆ ಹೋಗುವ ಮೊದಲು ಆ ಪ್ರದೇಶದ ಬಗ್ಗೆ ಕೆಲವು ವಿವರಗಳನ್ನು ಇಂಟರ್ನೆಟ್ ಮೂಲಕ ತಿಳಿದುಕೊಂಡೆ . ಅದರ ಸಂಕ್ಷಿಪ್ತ ವಿವರಣೆ ಹೀಗಿದೆ : ಈ ಪ್ರದೇಶವು ಸಾಂತಾಕ್ರೂಜ್ ಪರ್ವತದ ತಪ್ಪಲಿನಲ್ಲಿರುವ ಸೋಕ್ವಿಲ್ ಹಳ್ಳಿಯಿಂದ ಒಂದೂವರೆ ಮೈಲಿ ದೂರದಲ್ಲಿ ಸುಂದರ ಅರಣ್ಯ ಪ್ರದೇಶದಲ್ಲಿದೆ . ಇಲ್ಲಿ ಉಪನ್ಯಾಸ , ಧ್ಯಾನ , ಪ್ರಾರ್ಥನೆ , ಏಕಾಂತದಲ್ಲಿ ಉಳಿದುಕೊಳ್ಳುವ ಅನುಕೂಲವುಳ್ಳ ಹಾಗೂ ಸಮುದಾಯ ಸೇವೆಯ ಕಾರ್ಯಕ್ರಮಗಳನ್ನು ನಡೆಸಲಾಗುವುದು . ಹೆಸರೇ ಹೇಳಿರುವಂತೆ ಇದು ಮಹಾಯಾನ ಬೌದ್ಧ ಪರಂಪರೆಗೆ ಸೇರಿದ್ದು . ಇಲ್ಲಿ 6 ಮೈಲಿ ಸುತ್ತಳತೆಯ ಚಾರಣ ಮಾಡಲು ಹಾದಿಯಿರುವ (TREKKING TRAIL) ವಿಷಯವನ್ನು ತಿಳಿದು ಅಲ್ಲಿ ಕೆಲವು ದೂರ ನಡೆದೆವು . ಈ ಹಾದಿಯು ಕಡಿದಾದ ಏರುವಿಕೆಯನ್ನು ಹೊಂದಿದ್ದು ನನ್ನ ಪತ್ನಿಗೆ ಬಹಳ ದೂರ ನಡೆಯಲು ಸಾಧ್ಯವಾಗದಿದ್ದರಿಂದ 2 ಮೈಲಿ ನಡೆದು ಮರಳಿದೆವು . ಅಲ್ಲಿ ಕಂಡ ಕೆಲವು ಸುಂದರ ದೃಶ್ಯಗಳನ್ನು ಈ ಕೆಳಗೆ...

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು ಫೆಬ್ರವರಿ ತಿಂಗಳಿನಲ್ಲಿ ಬಿ.ವಿ.ರಮೇಶ್ ಹಾಗೂ ವೆಂಕಣ್ಣ ಆಚಾರ್ಯ ರವರೊಂದಿಗೆ ಪಶ್ಹಿಮ ಬಂಗಾಳದಲ್ಲಿನ ಸಂಡಕ್ಫೂ ಶಿಖರಾರೋಹಣ ಮಾಡುವ ಮೊದಲೇ ನನ್ನ ಗುಜರಾತ್ ರಾಜ್ಯದಲ್ಲಿನ ಕಛ್ ಪ್ರವಾಸದಲ್ಲಿ ಜಯಂತ್ ರವರಿಗೆ ಮಾತು ಕೊಟ್ಟಂತೆ ಏಪ್ರಿಲ್ ತಿಂಗಳಿನಲ್ಲಿ ಕೇದಾರ್ಕಾಂತ ಶಿಖರಾರೋಹಣ ಮಾಡಲು ತೀರ್ಮಾನಿಸಿ ಅದರಂತೆ ಜನವರಿ ತಿಂಗಳಿನಲ್ಲೇ ಇಂಡಿಯಾ ಹೈಕ್ ರವರಲ್ಲಿ ನನಗೆ ಹಾಗೂ ಶ್ರೀಕಾಂತ್ ಕೊಲ್ಹಾರ ರಿಗೆ ಸ್ಥಳವನ್ನು ಕಾಯ್ದಿರಿಸಿದ್ದೆ. ಹಾಗೂ ಜಯಂತ್ ರವರೂ ಕೂಡ ತಮ್ಮ ಸ್ಥಳವನ್ನು ಕಾದಿರಿಸಿದ್ದರು. ಅದರಂತೆ ನಾನು ಹಾಗೂ ಶ್ರೀಕಾಂತ್ ಮೊದಲೇ ಪ್ರಯಾಣಕ್ಕೆ ಸಂಬಂದಿಸಿದಂತೆ ರೈಲಿನಲ್ಲಿ ಟಿಕೆಟ್ ನ್ನು ಬುಕ್ ಮಾಡಿದ್ದೆವು. ಸ್ವಲ್ಪ ದಿನದ ನಂತರ ನಾವಿಬ್ಬರೂ ಏಪ್ರಿಲ್ ನಲ್ಲೇ ಅಮೆರಿಕ ಪ್ರಯಾಣಮಾಡಬೇಕಾದ ಸಂದರ್ಭ ಬಂದಿದ್ದರಿಂದ ನವದೆಹಲಿಗೆ ರೈಲಿನಲ್ಲಿ ಹೋಗುವ ಬದಲು ವಿಮಾನದಲ್ಲಿ ಪ್ರಯಾಣಿಸಲು ತೀರ್ಮಾನಿಸಿ ಅದರಂತೆ ಟಿಕೆಟ್ ನ್ನು ಬುಕ್ ಮಾಡಿದೆವು. ಅನಂತರ ಫೆಬ್ರವರಿ ತಿಂಗಳಿನಲ್ಲಿ ನನ್ನ ತಮ್ಮ ಅನಂತಮೂರ್ತಿಯ ಮನೆಗೆ ಹೋಗಿದ್ದಾಗ ಈ ವಿಷಯವನ್ನು ತಿಳಿಸಿದಾಗ ಅವನೂ ತಾನು ಹಾಗೂ ಉಮಾ ಸಹ ನಮ್ಮ ಜೊತೆಗೆ ಬರಲು ತೀರ್ಮಾನಿಸಿದರು. ಅದರಂತೆ ಅವರಿಗೂ ಇಂಡಿಯಾ ಹೈಕ್ ನಲ್ಲಿ ಮತ್ತೆರಡು ಸ್ಥಳಗಳನ್ನು ಬುಕ್ ಮಾಡಿ ಡೆಹರಾಡೂನಿಗೆ ಹೋಗಿಬರುವ ಪ್ರಯಾಣವನ್ನು ಬುಕ್ ಮಾಡಿದೆವು. ಅನಂತರ ಮೂರ್ತಿ ಹಾಗೂ ಉಮ...

ರಾಷ್ಟ್ರೀಯ ಗಿರ್ ಅನ್ವೇಷಣಾ ಹಾಗೂ ಚಾರಣ ಮತ್ತು ತರಬೇತಿ ಕಾರ್ಯ ಯಾತ್ರೆ 2018

ರಾಷ್ಟ್ರೀಯ ಗಿರ್ ಅನ್ವೇಷಣಾ ಹಾಗೂ ಚಾರಣ ಮತ್ತು ತರಬೇತಿ ಕಾರ್ಯ ಯಾತ್ರೆ 2018 ನವೆಂಬರ್ 2018 ರಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯ ಗುಜರಾತ್ ಶಾಖೆಯ ಕಾರ್ಯದರ್ಶಿಯಾದ ಶ್ರೀ ಅನಂತ್ ಪಾರಮಾರ್ ಅವರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ನಿವೃತ್ತರಾದ ಐದು ಜನ ಅಧಿಕಾರಿಗಳಿಗೆ ಜುನಾಘಡ್ ನಲ್ಲಿನ ಪರ್ವತ ಪ್ರದೇಶದಲ್ಲಿ ಚಾರಣ ಮಾಡಲು ವಿಶೇಷವಾದ ಆಹ್ವಾನ ಬಂದಿತು . ಈ ಐದು ನಿವೃತ್ತ ಅಧಿಕಾರಿಗಳೆಂದರೆ ಸರ್ವಶ್ರೀ . ಪಾಲಹಳ್ಳಿ ರಮೇಶ , ಕೆ . ವೆಂಕಯ್ಯಸುಬ್ಬಯ್ಯ , ಸುರೇಶ ಬಾಬು , ಹೆಚ್ . ಆರ್ . ಗುರುರಾಜ್ ಹಾಗೂ ಈ ಲೇಖನ ಪ್ರಸ್ತುತಿ ಪಡಿಸುತ್ತಿರುವ ಗುರುಪ್ರಸಾದ್ ಹಾಲ್ಕುರಿಕೆ . ಈ ಆಹ್ವಾನ ಬರಲು ತೆರೆ ಮರೆಯಲ್ಲಿ ಕೆಲಸಮಾಡಿದವರೆ ಶ್ರೀ . ರಮೇಶ್ . ಈ ಚಾರಣದ ಬಗ್ಗೆ ಚರ್ಚಿಸಲು ಐದೂ ಜನರು ಒಂದೆಡೆ ಸೇರಿದೆವು . ರಮೇಶ್ ಅವರು ಚಾರಣದ ಜೊತೆಗೆ ಸುತ್ತ ಮುತ್ತಲಿನ ಕೆಲವು ತೀರ್ಥ ಕ್ಷೇತ್ರ ಹಾಗೂ ಚಾರಿತ್ರಿಕ ಸ್ಥಳಗಳನ್ನೂ ಸಂದರ್ಶಿಸಬಹುದೆಂದು ಸಲಹೆ ನೀಡಿದರು . ರಮೇಶನು ಹೇಳಿದನೆಂದ ಮೇಲೆ ಅದರ ಬಗ್ಗೆ ಬೇರೆಯವರು ಮಾತನಾಡುವುದುಂಟೆ ! ಎಲ್ಲರೂ ಅದಕ್ಕೆ ಒಪ್ಪಿದೆವು . ಮೊದಲಿಗೆ ಚಾರಣದ ವಿವರಗಳು ಈ ರೀತಿಯಾಗಿತ್ತು : ವೈಹೆಚ್ಎಐ ಬೇಸ್ ಕ್ಯಾಂಪ್ - ಪಂಡಿತ್ ದೀನ ದಯಾಳ್ ಉಪಾಧ್ಯಾಯಿ ಪರ್ವತಾ ರೋಹಣ ಸಂಸ್ಥೆ . ●       ವೈಹೆ...