Skip to main content

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ


ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ. ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ-ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ, ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ-ಕೇದಾರಗಳಿಗೆ, ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ, ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ-ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು. ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ. ಅದೇ ಕರ್ದಳೀವನ ಪರಿಕ್ರಮ. ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು. ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು. ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು. ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ. ಭಾರತದಲ್ಲಿ ಬಹು ಮುಖ್ಯವಾಗಿ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳಲ್ಲಿ  ಸುಮಾರು 20 ಕೋಟಿ ದತ್ತಾತ್ರೇಯ ಹಾಗೂ ರಾಮದಾಸರ ಭಕ್ತರಿದ್ದಾರೆ.

ಕರ್ದಳೀವನ ಕ್ಷೇತ್ರವು ಅತ್ಯಂತ ದುರ್ಗಮ ಪ್ರದೇಶವಾದ ನಲ್ಲಮಲ್ಲ ಅರಣ್ಯ ಶ್ರೇಣಿಯಲ್ಲಿ ಕರ್ನೂಲ್ ಜಿಲ್ಲೆಯಲ್ಲಿ ಇರುವುದು. ಈ ಪ್ರದೇಶವನ್ನುನಂದಿಕೋಟಕುರಎಂದೂ ಕರೆಯಲಾಗುತ್ತದೆ, ಏಕೆಂದರೆ ಇದರ ಸುತ್ತಲೂ ದಟ್ಟವಾದ ಅರಣ್ಯವಿರುವುದು. ಸಮುದ್ರಮಟ್ಟದಿಂದ 1500 ಅಡಿ ಎತ್ತರದಲ್ಲಿರುವುದು.  ಕೃಷ್ಣ ನದಿಯು ಈ ದುರ್ಗಮ ಬೆಟ್ಟಗಳಲ್ಲಿ ಹರಿಯುವುದು ಹಾಗೂ ಇಲ್ಲಿ ಈ ನದಿಯನ್ನು ಪಾತಾಳ ಗಂಗ ಎಂದೂ ಕರೆಯಲ್ಪಡುತ್ತದೆ. . ಈ ಕ್ಷೇತ್ರವು ಶ್ರೀಶೈಲ ಕ್ಷೇತ್ರದಿಂದ ಕೇವಲ 21 ಕಿ.ಮೀ. ದೂರದಲ್ಲಿರುವುದು.

ಸದ್ಗುರು ದತ್ತಾತ್ರೇಯರ ಎರಡನೇ ಅವತಾರವಾದ ಸದ್ಗುರು ನರಸಿಂಹ ಸರಸ್ವತಿ ಯತಿವರ್ಯರು ಗಾಣಗಾಪುರವನ್ನು ಬಿಟ್ಟು ಈ ಕ್ಷೇತ್ರದಲ್ಲಿ ಬಂದು ನೆಲಸಿದರೆಂದು ಗುರು ಚರಿತ್ರೆಯ 50 ಮತ್ತು 51 ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಅನೇಕ ಶತಮಾನಗಳ ಹಿಂದೆ ಈ ಕಾಡಿನಲ್ಲಿ ವಾಸಿಸುತ್ತಿರುವ ಚೆಂಚು ಬುಡಕಟ್ಟು  ಜನಾಂಗದ 
ಮರಕಡಿಯುವ ಒಬ್ಬನು ಈ ಸ್ಥಳಕ್ಕೆ ಬಂದು ಒಂದು ದೊಡ್ಡ ಮರದ ಕೊಂಬೆಯನ್ನು ಕಡಿಯಲು ಕೊಡಲಿಯನ್ನು ಬೀಸಿದೊಡನೆ ಅದು ಹತ್ತಿರದಲ್ಲಿದ್ದ ಒಂದು ದೊಡ್ಡ ಹುತ್ತಕ್ಕೆ ಬಡಿದು ಕೊಡಲಿಯು ಹುತ್ತದೊಳಗೆ ಹೋಗಿ ಹುತ್ತದೊಳಗೆ ತಪ್ಪಸ್ಸನ್ನಾಚರಿಸುತ್ತಿದ್ದ ಸದ್ಗುರು ನರಸಿಂಹ ಸರಸ್ವತಿಯವರ ತೊಡೆಗೆ ಬಡಿದು ಅಲ್ಲಿಂದ ರಕ್ತವು ಹೊರಬರತೊಡಗಿತು. ತಮ್ಮ ತಪಸ್ಸಿಗೆ ಭಂಗ ಬಂದಿದ್ದರಿಂದ ಅವರು ಹೊರಬಂದು ತಮ್ಮ ಆಜಾನುಬಾಹುವಿನ ಆಕೃತಿಯನ್ನು ಪ್ರದರ್ಶಿಸಿದರು. ಅದನ್ನು ನೋಡಿ ಭಯಗೊಂಡ ಮರಕಡಿಯುವವನು ಗಳಗಳನೆ ಅಳುತ್ತಾ ಅವರಿಗೆ ನಮಸ್ಕರಿಸಿ ತನ್ನನ್ನು ಕ್ಷಮಿಸಬೇಕೆಂದು ಬೇಡಿಕೊಂಡನು.

ಈ ಪ್ರದೇಶವು ಕ್ರಿಸ್ತ ಪೂರ್ವ ಸುಮಾರು 30000 - 40000 ವರ್ಷಗಳಿಗಿಂತ ಹಳೆಯದೆಂದು ತಿಳಿದುಬರುತ್ತದೆ. ಮಹಾಭಾರತದ ವನಪರ್ವದಲ್ಲಿ, ಸ್ಕಾಂದ ಪುರಾಣ, ಮಾರ್ಕಂಡೆಯ ಪುರಾಣ ಹಾಗೂ ಭಾಗವತ ಪುರಾಣಗಳಲ್ಲಿ ಈ ಕ್ಷೇತ್ರದ ಬಗ್ಗೆ ವಿವರಿಸಲಾಗಿದೆ. ಆದಿ ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಭೇಟಿಕೊಟ್ಟು ಇಲ್ಲೇ ಶಿವಾನಂದಲಹರಿ ಸ್ತೋತ್ರವನ್ನು ರಚಿಸಿದರೆಂದು ತಿಳಿದುಬರುತ್ತದೆ. ಅಲ್ಲದೆ ಸೋಮೇಶ್ವರನ ಕಥಾಸರಿತ್ಸಾಗರ, ಭವಭೂತಿಯ ಮಾಲತಿ ಮಾಧವ ಹಾಗೂ ಬಾಣಭಟ್ಟನ ಕಾದಂಬರಿ ಕೃತಿಗಳಲ್ಲಿ ಈ ಕ್ಷೇತ್ರದ ಮಹಿಮೆಯನ್ನು ವಿವರಿಸಲಾಗಿದೆ.  ತ್ರೇತಾಯುಗದ ಆದಿಭಾಗದಲ್ಲಿ ಹಿರಣ್ಯಕಷಿಪುವು ಈ ಕ್ಷೇತ್ರದಲ್ಲೇ ಶಿವನನ್ನು ಕುರಿತು ತಪ್ಪಸ್ಸನ್ನಾಚರಿಸಿದನೆಂದು, ಹಾಗು ಶ್ರೀರಾಮಚಂದ್ರನು ಒಂದು ಸಾವಿರ ಶಿವಲಿಂಗಗಳನ್ನು ಇಲ್ಲೇ ಪ್ರತಿಷ್ಠಾಪಿಸಿದನೆಂದು, ಹಾಗೂ ದ್ವಾಪರಯುಗದಲ್ಲಿ ಪಾಂಡವರು ಈ ಕ್ಷೇತ್ರದಲ್ಲೇ ತಮ್ಮ ವನವಾಸದ ಸ್ವಲ್ಪ ಸಮಯವನ್ನು ಕಳೆದರೆಂದು ಪೌರಾಣಿಕ ಗ್ರಂಥಗಳಲ್ಲಿ ವಿವರಿಸಲಾಗಿದೆ.   

ಈ ಕ್ಷೇತ್ರದಲ್ಲಿ ಅನೇಕ ಋಷಿಮುನಿಗಳು ತಮ್ಮ ಆಧ್ಯಾತ್ಮಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಆಗಾಗ್ಗೆ ನೆಲಸುತ್ತಿದ್ದರೆಂದು ತಿಳಿದು ಬರುತ್ತದೆ. ಅವರುಗಳಲ್ಲಿ ಮುಖ್ಯರಾದವೆಂದರೆ - ಜಮದಗ್ನಿ, ಪರಶುರಾಮ, ಕಣ್ವ, ಮಾರ್ಕಂಡೇಯ, ಅಗಸ್ತ್ಯ, ಮತ್ಸೇoದ್ರನಾಥ, ಗೋರಖನಾಥ ಹಾಗೂ ಜಾಲಿಂದರನಾಥ (ನಾಥ ಪಂಥದವರು). ಈ ಕ್ಷೇತ್ರದಲ್ಲೇ ಕಿರಾತಾರ್ಜುನೀಯ ಕಾಳಗವು ನಡೆದು ಶಿವನಿಂದ ಅರ್ಜುನನು ಪಾಶುಪತಾಸ್ತ್ರವನ್ನು ಪಡೆದನೆಂದು ಮಹಾಭಾರತದಲ್ಲಿ ವಿವರಿಸಲಾಗಿದೆ.

ಶ್ರೀಶೈಲ ಹಾಗೂ ಕರ್ದಳೀವನ ಕ್ಷೇತ್ರಗಳು ಶೈವ ಪಂಥದವರಿಗೆ ಅತಿ ಮುಖ್ಯವಾದದ್ದು ಹಾಗೂ ಇಲ್ಲಿ ಶಿವ, ಕಾಪಾಲಿಕರು, ಕಾಲಮುಖರು, ಪಶುಪತರು, ಸಿದ್ದರು ವಾಸಿಸುತ್ತಿದ್ದರು. ಈ ವನದಲ್ಲಿ ದೊರಕುವ ಭ್ರಮರ ಎಂಬ ಮಾವಿನ ಹಣ್ಣನ್ನು ಕತ್ತರಿಸಿದೊಡನೆ ಅದರೊಳಗಿನಿಂದ ಅನೇಕ ಭ್ರಮರಗಳು ಹಾರಿ ಹೊರಬರುತ್ತವೆ. ಅನಂತರ ಈ ಹಣ್ಣನು ಹಾಲಿನೊಡನೆ 21ದಿನ ಸತತವಾಗಿ ಕಾಯಿಸಿ ಅದರ ರಸವನ್ನು ಸೇವಿಸಿದರೆ ಮನುಷ್ಯನ ಶರೀರವು ಗಟ್ಟಿಮುಟ್ಟಾಗಿ, ಹಗುರವಾಗುತ್ತದೆಂದು ನಂಬಿಕೆ.

ಕರ್ದಳೀವನ ಕ್ಷೇತ್ರದ ಬಳಿ 12ನೇ ಶತಮಾನದ ವೀರಶೈವ ಮತಾನುಯಾಯಿಯಾದ ಮಹಾಸತಿ ಅಕ್ಕಮಹಾದೇವಿಯ ಗುಹೆಯಿರುವುದು.  ಈ ಪ್ರದೇಶದಲ್ಲಿ ಆರು ನದಿಗಳು - ವೆನ್ನ, ತುಂಗಭದ್ರಾ, ಭೀಮಾ, ಮಾಲಾ, ಭಾವನಾ ಮತ್ತು ಅಸ್ಮಿ ನದಿಗಳು ಕೃಷ್ಣ ನದಿಯನ್ನು ಸೇರಿಕೊಳ್ಳುತ್ತವೆ. ಹಾಗೂ ಮೂರು ಪರ್ವತಗಳಾದ ಭ್ರಹ್ಮಗಿರಿ, ವಿಷ್ಣುಗಿರಿ ಹಾಗೂ ರುದ್ರಗಿರಿಗಳು ಸೇರುತ್ತವೆ.

ಕರ್ದಳೀವನ ಕ್ಷೇತ್ರದೆಡಗಿನ ಪ್ರವಾಸದ ವಿವರಗಳು

ಶ್ರೀಶೈಲದಿಂದ ಕರ್ದಳೀವನದೆಡೆಗೆ ಹೋಗಿ ಬರಲು ಮೂರು ದಿನಗಳು ಬೇಕು. ಅದರ ವಿವರಗಳು ಈ ರೀತಿ:

ಮೊದಲನೇ ದಿನ: ಬೆಂಗಳೂರಿನಿಂದ ಶ್ರೀಶೈಲದೆಡೆಗೆ ಪ್ರಯಾಣ.

ಎರಡನೇ ದಿನ: ಶ್ರೀಶೈಲದಿಂದ ಮೋಟಾರ್ ಬೋಟಿನಲ್ಲಿ ಪಾತಾಳಗಂಗೆಯೆಡೆಗೆ ಹೊರಟು ಅಲ್ಲಿಂದ ಕಾಲ್ನಡಿಗೆಯಲ್ಲಿ ವ್ಯoಕಟೇಶ್ ಕಿನಾರದ ಮೂಲಕ 9 ಕಿ.ಮೀ ನಡೆದರೆ ಅಕ್ಕಮಹಾದೇವಿ ಗುಹೆಯನ್ನು ತಲಪಬೇಕು. ರಾತ್ರೆಯ ವಾಸ್ತವ್ಯವು ಅಕ್ಕಮಹಾದೇವಿ ಗುಹೆಯಲ್ಲಿ.

ಮೂರನೇ ದಿನ :  ಅಕ್ಕಮಹಾದೇವಿ ಗುಹೆಯಿಂದ 3 ಕಿ.ಮೀ ದೂರದ ಕರ್ದಳೀವನವನ್ನು ತಲುಪಿ ಅಲ್ಲಿಂದ ಮರಳಿ ವ್ಯoಕಟೇಶ್ ಕಿನಾರದೆಡೆಗೆ ಚಾರಣ ಹಾಗೂ ರಾತ್ರೆಯ ವಾಸ್ತವ್ಯ.

ನಾಲ್ಕನೇ ದಿನ : ವ್ಯoಕಟೇಶ್ ಕಿನಾರದಿಂದ ಮರಳಿ ಶ್ರೀಶೈಲದೆಡೆಗೆ ಪಯಣ ಹಾಗೂ ರಾತ್ರೆ ಶ್ರೀಶೈಲದಲ್ಲಿ ವಾಸ್ತವ್ಯ.

ಐದನೇ ದಿನ : ಶ್ರೀಶೈಲದಿಂದ ಮರಳಿ ಬೆಂಗಳೂರಿಗೆ ಪ್ರಯಾಣ.

ಶ್ರೀಶೈಲದಿಂದ ಶ್ರೀಶೈಲಕ್ಕೆ ಪ್ರಯಾಣದ ವೆಚ್ಚ ರೂ.5500/- (ಒಬ್ಬರಿಗೆ).

ನಡೆಸಿಕೊಡುವವರು: MOUNTAIN HIKERS, PUNE.


Comments

Popular posts from this blog

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು ಏಪ್ರಿಲ್ 22 ರಂದು ಸ್ಯಾನ್ ಫ್ರಾನ್ಸಿಸ್ಕೊ   ವಿಮಾನದಲ್ಲಿ ಬಂದು ಅಲ್ಲಿಂದ 40 ಮೈಲಿ ದೂರದ ಸನ್ನಿವೇಲ್ ನಗರಕ್ಕೆ ಬಂದು ನನ್ನ ಮಗನ ಮನೆಗೆ ತಲುಪಿದ ನಂತರ ಎರಡು ದಿನ ವಿಶ್ರಾ o ತಿಯ ನಂತರ ಶನಿವಾರದಂದು ನನ್ನನ್ನು   ನನ್ನ ಮಗನು ಇಲ್ಲಿಂದ 40 ಮೈಲಿ ದೂರದಲ್ಲಿರುವ ಲ್ಯಾಂಡ್ ಆಫ್ ಮೆಡಿಸನ್ ಬುದ್ಧ ಎಂಬ ಸುಂದರ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದನು . ಅಲ್ಲಿಗೆ ಹೋಗುವ ಮೊದಲು ಆ ಪ್ರದೇಶದ ಬಗ್ಗೆ ಕೆಲವು ವಿವರಗಳನ್ನು ಇಂಟರ್ನೆಟ್ ಮೂಲಕ ತಿಳಿದುಕೊಂಡೆ . ಅದರ ಸಂಕ್ಷಿಪ್ತ ವಿವರಣೆ ಹೀಗಿದೆ : ಈ ಪ್ರದೇಶವು ಸಾಂತಾಕ್ರೂಜ್ ಪರ್ವತದ ತಪ್ಪಲಿನಲ್ಲಿರುವ ಸೋಕ್ವಿಲ್ ಹಳ್ಳಿಯಿಂದ ಒಂದೂವರೆ ಮೈಲಿ ದೂರದಲ್ಲಿ ಸುಂದರ ಅರಣ್ಯ ಪ್ರದೇಶದಲ್ಲಿದೆ . ಇಲ್ಲಿ ಉಪನ್ಯಾಸ , ಧ್ಯಾನ , ಪ್ರಾರ್ಥನೆ , ಏಕಾಂತದಲ್ಲಿ ಉಳಿದುಕೊಳ್ಳುವ ಅನುಕೂಲವುಳ್ಳ ಹಾಗೂ ಸಮುದಾಯ ಸೇವೆಯ ಕಾರ್ಯಕ್ರಮಗಳನ್ನು ನಡೆಸಲಾಗುವುದು . ಹೆಸರೇ ಹೇಳಿರುವಂತೆ ಇದು ಮಹಾಯಾನ ಬೌದ್ಧ ಪರಂಪರೆಗೆ ಸೇರಿದ್ದು . ಇಲ್ಲಿ 6 ಮೈಲಿ ಸುತ್ತಳತೆಯ ಚಾರಣ ಮಾಡಲು ಹಾದಿಯಿರುವ (TREKKING TRAIL) ವಿಷಯವನ್ನು ತಿಳಿದು ಅಲ್ಲಿ ಕೆಲವು ದೂರ ನಡೆದೆವು . ಈ ಹಾದಿಯು ಕಡಿದಾದ ಏರುವಿಕೆಯನ್ನು ಹೊಂದಿದ್ದು ನನ್ನ ಪತ್ನಿಗೆ ಬಹಳ ದೂರ ನಡೆಯಲು ಸಾಧ್ಯವಾಗದಿದ್ದರಿಂದ 2 ಮೈಲಿ ನಡೆದು ಮರಳಿದೆವು . ಅಲ್ಲಿ ಕಂಡ ಕೆಲವು ಸುಂದರ ದೃಶ್ಯಗಳನ್ನು ಈ ಕೆಳಗೆ...

ಔoಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು

ಔ o ಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು   ಈ ಮಂದಿರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಟನೆಯದು . ಈ ಮಂದಿರವನ್ನು ಯಾದವ ವಂಶಸ್ಥ ಸ್ಯುನ ಎಂಬುವವನು ಕ್ರಿ . ಶ . 13 ನೇ ಶತಮಾನದಲ್ಲಿ ಮರುನಿರ್ಮಾಣ ಮಾಡಿದನೆಂದು ತಿಳಿದುಬರುತ್ತದೆ . ಮೂಲ ಮಂದಿರವನ್ನು ಪಾಂಡವಾಗ್ರಜ ಯುಧಿಷ್ಠಿರನು 14 ವನವಾಸದ ಸಮಯದಲ್ಲಿ ನಿರ್ಮಿಸಿದನೆಂದೂ ಹಾಗೂ ಔರಂಗಜೇಬನು ಈ ಮಂದಿರವನ್ನು ನಾಶಮಾಡುವ ಸಮಯದಲ್ಲಿ ಇದು ಏಳು ಅಂತಸ್ತಿನಿಂದ ಕೂಡಿತ್ತೆಂದು ಇತಿಹಾಸವು ತಿಳಿಸುತ್ತದೆ . ಈ ಮಂದಿರವನ್ನು ಹೇಮದ್ ಪಂಥಿ ಶೈಲಿಯಲ್ಲಿ ನಿರ್ಮಿಸಲಾಗಿದೆ . ಈ ಮಂದಿರದೊಂದಿಗೆ ಹಿಂದುಗಳ ವಾರ್ಕಾರಿ ಪಂಥದ ಸಂತರುಗಳಾದ ನಾಮದೇವ್ , ವಿಠೋಬ ಖೇಚ್ಛಾ , ಜ್ಞಾನೇಶ್ವರರ ಹೆಸರುಗಳು ಹಾಸುಹೊಕ್ಕಾಗಿದೆ . ಒಮ್ಮೆ ನಾಮದೇವನು , ಸಂತ ವಿಠೋಬನು ಈ ಮಂದಿರದೊಳಗಿರುವ ಶಿವಲಿಂಗದ ಮೇಲೆ ತನ್ನ ಕಾಲನ್ನು ಇಟ್ಟು ಮಲಗಿರುವುದನ್ನು ಕಂಡು ಆಕ್ಷೇಪಿಸಿದನು . ಅದಕ್ಕೆ ವಿಠೋಬನು ನಾಮದೇವನಿಗೆ ತನ್ನ ಕಾಲನ್ನು ಬೇರೆ ಎಲ್ಲಾದರೂ ಇಡಲೆಂದು ಸೂಚಿಸಿದನು . ಹಾಗೇ ಕಾಲನ್ನು ಎಲ್ಲಿ ಇಟ್ಟರೂ ಅಲ್ಲಿ ಕಾಲಿನ ಕೆಳಗೆ ಲಿಂಗವು ಉಧ್ಭವವಾಗುತ್ತಿತ್ತು . ವಿಠೋಬನು ತನ್ನ ಯೋಗಶಕ್ತಿಯಿಂದ ಮಂದಿರದೊಳಗೆಲ್ಲಾ ಲಿಂಗವನ್ನು ಸೃಷ್ಟಿಸಿ ಭಗವಂತನು ಸರ್ವಾ o ತರ್ಯಾಮಿ ಎಂಬ ವಿಷಯವನ್ನು ನಾಮದೇವನಿಗೆ ಮನವರಿಕೆ ಮಾಡಿಕೊಟ್ಟನು . ಈ ಕ್ಷೇತ್ರವನ್ನು ದಾರುಕಾವನವೆಂದೂ ಕರೆಯಲ್ಪಟ್ಟಿದೆ . ಈ ಮಂದಿರದಲ್ಲಿ ...