Skip to main content

ಛತ್ತೀಸ್ ಘಡ್ ನಲ್ಲಿನ ದಟ್ಟವಾದ ಕಾಡಿನಲ್ಲಿ ಚಾರಣ


ಛತ್ತೀಸ್ ಘಡ್ ನಲ್ಲಿನ ದಟ್ಟವಾದ ಕಾಡಿನಲ್ಲಿ ಚಾರಣ

ಸ್ಥೂಲ ಸಮೀಕ್ಷೆ

ಛತ್ತೀಸ್ ಘಡ್ ನಲ್ಲಿನ ಚಾರಣವು ನಿಮ್ಮನ್ನು ಆಶ್ಚರ್ಯದ ಕಡಲಿನಲ್ಲಿ ಮುಳುಗಿಸುತ್ತದೆ. ನೀವು ಕಾಡಿನಲ್ಲಿ ಅನೇಕ ಚಾರಣಗಳನ್ನು ಮಾಡಿದ್ದರೂ ಅವುಗಳ್ಯಾವುದೂ ಈ ಚಾರಣದಂತಿರುವುದಿಲ್ಲ.

ಛತ್ತೀಸ್ ಘಡ್ ರಾಜ್ಯದ ಹೆಸರನ್ನು ಕೇಳುತ್ತಿದ್ದಂತೆ ನಮ್ಮ ಮನಸ್ಸಿನ ಮುಂದೆ ಬರುವುದೆಂದರೆ ದಂಡಕಾರಣ್ಯ ಪ್ರದೇಶದಲ್ಲಿನ ದಟ್ಟವಾದ ಕಾಡುಗಳು. ಪ್ರತಿನಿತ್ಯದ ಚಾರಣದಲ್ಲಿ ವೈವಿಧ್ಯತೆಯಿಂದ ಕೂಡಿದ ಕಾಡುಗಳನ್ನು ನೋಡಬಹುದು. ಅಷ್ಟೇ ಏಕೆ, ಒಂದು ದಿನದ ಚಾರಣದಲ್ಲೂ ವಿವಿಧ ರೀತಿಯ ಕಾಡುಗಳನ್ನೂ ನೋಡಿ ಆಶ್ಚರ್ಯ ಪಡಬಹುದು. ಯಾವುದೇ ಸಂದರ್ಭದಲ್ಲೂ ನೀವು ಅತಿಯಾದ ಕಾಡುಗಳೆಂದು ಬೇಸರಿಸುವ ಸಂದರ್ಭವುಂಟಾಗುವುದಿಲ್ಲ. ವೈವಿಧ್ಯತೆಯಿಂದ ಕೂಡಿದ ಕಾಡುಗಳು ನಿಮ್ಮನ್ನು ದಿಗ್ಭ್ರಮೆಗೊಳಿಸುವುದು.

ಚಾರಣದಲ್ಲಿ ನೀವು ಪ್ರಸ್ಥಭೂಮಿಯಲ್ಲಿ ನಡೆಯುತ್ತೀರ, ಕಣಿವೆಗಳಲ್ಲಿ ಧುಮುಕುತ್ತೀರ ಹಾಗೂ ನದಿ, ತೊರೆಗಳನ್ನು ದಾಟುತ್ತೀರ ಮತ್ತು ಜಲಪಾತಗಳನ್ನು ವೀಕ್ಷಿಸುವಿರಿ. ಇದ್ದಕ್ಕಿದ್ದಂತೆ ನೀವು ಪುರಾತನ ವಸಾಹತುಗಳನ್ನು (ವಿನಾಶದ ಅಂಚಿನಲ್ಲಿರುವ ಪುರಾತನ ಬುಡಕಟ್ಟಿನ ಜನಗಳನ್ನು - ಬಗ ಬುಡಕಟ್ಟು) ಹಾದುಹೋಗುವಿರಿ ಹಾಗೂ ಅವರ ಜೀವನ ಶೈಲಿಯನ್ನು ಗಮನಿಸುವಿರಿ. ಚಾರಣವು ದಟ್ಟವಾದ ಕಾಡಿನ ಜಮಖಾನೆ ಹಾಗೂ ಅತಿ ಎತ್ತರದ ವೃಕ್ಷಗಳ ಛಾವಣಿಗಳ ನಡುವಿನಿಂದ ಕೂಡಿ ಸಿನೀಮಯ ರೀತಿಯದ್ದಾಗಿರುವುದು.

ನಮ್ಮ ಚಾರಣವು ವಿಂಧ್ಯ ಹಾಗೂ ಸಾತ್ಪುರ ಪರ್ವತ ಶ್ರೇಣಿಗಳು ಸಂಧಿಸುವ ಪ್ರದೇಶ, ಇದು ನರ್ಮದಾ ನದಿಯ ಉಗಮ ಸ್ಥಳವಾದ ಅಮರಕಂಟಕ್ ಬಳಿ. ಇದು ಅಚನಕ್ಮಾರ್ ಟೈಗರ್ ರಿಸರ್ವ್ ಪ್ರದೇಶ ಸಮೀಪ. ನಮ್ಮ ಚಾರಣವು ಇಲ್ಲಿನ ಲಕ್ಷ್ಮಣಧಾರ ಜಲಪಾತದ ಬಳಿ ಕೊನೆಗೊಳ್ಳುವುದು.
ಈ ಚಾರಣವನ್ನು ಛತ್ತೀಸ್ ಘಡ್ ಪ್ರವಾಸೋದ್ಯಮ ಹಾಗೂ ಇಂಡಿಯಾ ಹೈಕ್ ಸಂಸ್ಥೆಯ ಜಂಟಿ ಮುಂದಾಳತ್ವದಲ್ಲಿ ನಡೆಸಲಾಗುವುದು.

ಚಾರಣದ ಸಂಕ್ಷಿಪ್ತ ಮಾಹಿತಿ :

ಮೊದಲನೇ ದಿನ : ಪೆಂಡ್ರ ರಸ್ತೆ ರೈಲ್ವೆ ನಿಲ್ದಾಣದಿಂದ ರಾಜ್ಮೆರ್ ಘರ್ ವರೆಗೆ 20 ಕಿ.ಮೀ ದೂರದ 1 - 2 ಘಂಟೆಗಳ ಕಾರಿನ ಪ್ರಯಾಣ. ರಾಜ್ಮೆರ್ ಘರ್ ಹಳ್ಳಿಯು ಒಂದು ಪ್ರಸ್ಥಭೂಮಿಯಲ್ಲಿದ್ದು ಅತಿ ಕಡಿಮೆ ಜನಸಂಖ್ಯೆಯಿಂದ ಕೂಡಿದ್ದು, ಇದು ದಟ್ಟವಾದ ಕಾಡಿನಿಂದಾವೃತವಾಗಿರುವುದು.

ಎರಡನೇ ದಿನ : ರಾಜ್ಮೆರ್ ಘರ್ (1149 ಮೀ) ನಿಂದ ಚುಟ್ಕಿರೇವರ್ (781 ಮೀ) ವರೆಗಿನ 7-8 ಘಂಟೆಗಳ 15 ಕಿ.ಮೀ ಚಾರಣ. ಈ ಮಾರ್ಗವು ಸಂಪೂರ್ಣವಾಗಿ ಮರಗಳ ನೆರಳಿನಿಂದ ಕೂಡಿದ ಸಂಪೂರ್ಣವಾದ ಕಾಡಿನ ಹಾದಿ.

ಮೂರನೇ ದಿನ : ಚುಟ್ಕಿರೇವರ್ ನಿಂದ ಕಿಯೊಂಚಿ (781 ಮೀ ನಿಂದ 600 ಮೀ ಅವರೋಹಣ) - 4-5 ಘಂಟೆಗಳ 9 ಕಿ.ಮೀ ಸಂಪೂರ್ಣವಾದ ಕಾಡಿನ ಹಾದಿ.

ನಾಲ್ಕನೇ ದಿನ : ಕಿಯೊಂಚಿಯಿಂದ ಮುಸಿಯಾರಿಗೆ (600 ಮೀ ನಿಂದ 507 ಮೀ ಅವರೋಹಣ) 5 - 6 ಘಂಟೆಗಳ 13 ಕಿ.ಮೀ ದೂರದ ಬಸ್ತಿಯ ಮೂಲಕ ಕಾಡಿನ ಹಾದಿ.

ಐದನೇ ದಿನ : ಮುಸಿಯಾರಿಯಿಂದ ದೈಹನ್ಪಾರ ಹಾಗೂ ಅಲ್ಲಿಂದ ಪೆಂಡ್ರ ರಸ್ತೆಯೆಡೆಗೆ - 6 ಘಂಟೆಗಳ 12 ಕಿ.ಮೀ ದೂರದ ಚಾರಣ ಹಾಗೂ ನಂತರ 17 ಕಿ.ಮೀ ವರೆಗೂ ಕಾರಿನಲ್ಲಿ ಪಯಣ. ಹಾದಿಯು ಕಾಡಿನ ಹಾಗೂ ಹಳ್ಳಿಯಲ್ಲಿನ ಮಾರ್ಗವಾಗಿರುವುದು.

ಕೃಪೆ : ಇಂಡಿಯಾ ಹೈಕ್ ಸಂಸ್ಥೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : Indiahikes.com


Comments

Popular posts from this blog

ರಾಷ್ಟ್ರೀಯ ಗಿರ್ ಅನ್ವೇಷಣಾ ಹಾಗೂ ಚಾರಣ ಮತ್ತು ತರಬೇತಿ ಕಾರ್ಯ ಯಾತ್ರೆ 2018

ರಾಷ್ಟ್ರೀಯ ಗಿರ್ ಅನ್ವೇಷಣಾ ಹಾಗೂ ಚಾರಣ ಮತ್ತು ತರಬೇತಿ ಕಾರ್ಯ ಯಾತ್ರೆ 2018 ನವೆಂಬರ್ 2018 ರಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯ ಗುಜರಾತ್ ಶಾಖೆಯ ಕಾರ್ಯದರ್ಶಿಯಾದ ಶ್ರೀ ಅನಂತ್ ಪಾರಮಾರ್ ಅವರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ನಿವೃತ್ತರಾದ ಐದು ಜನ ಅಧಿಕಾರಿಗಳಿಗೆ ಜುನಾಘಡ್ ನಲ್ಲಿನ ಪರ್ವತ ಪ್ರದೇಶದಲ್ಲಿ ಚಾರಣ ಮಾಡಲು ವಿಶೇಷವಾದ ಆಹ್ವಾನ ಬಂದಿತು . ಈ ಐದು ನಿವೃತ್ತ ಅಧಿಕಾರಿಗಳೆಂದರೆ ಸರ್ವಶ್ರೀ . ಪಾಲಹಳ್ಳಿ ರಮೇಶ , ಕೆ . ವೆಂಕಯ್ಯಸುಬ್ಬಯ್ಯ , ಸುರೇಶ ಬಾಬು , ಹೆಚ್ . ಆರ್ . ಗುರುರಾಜ್ ಹಾಗೂ ಈ ಲೇಖನ ಪ್ರಸ್ತುತಿ ಪಡಿಸುತ್ತಿರುವ ಗುರುಪ್ರಸಾದ್ ಹಾಲ್ಕುರಿಕೆ . ಈ ಆಹ್ವಾನ ಬರಲು ತೆರೆ ಮರೆಯಲ್ಲಿ ಕೆಲಸಮಾಡಿದವರೆ ಶ್ರೀ . ರಮೇಶ್ . ಈ ಚಾರಣದ ಬಗ್ಗೆ ಚರ್ಚಿಸಲು ಐದೂ ಜನರು ಒಂದೆಡೆ ಸೇರಿದೆವು . ರಮೇಶ್ ಅವರು ಚಾರಣದ ಜೊತೆಗೆ ಸುತ್ತ ಮುತ್ತಲಿನ ಕೆಲವು ತೀರ್ಥ ಕ್ಷೇತ್ರ ಹಾಗೂ ಚಾರಿತ್ರಿಕ ಸ್ಥಳಗಳನ್ನೂ ಸಂದರ್ಶಿಸಬಹುದೆಂದು ಸಲಹೆ ನೀಡಿದರು . ರಮೇಶನು ಹೇಳಿದನೆಂದ ಮೇಲೆ ಅದರ ಬಗ್ಗೆ ಬೇರೆಯವರು ಮಾತನಾಡುವುದುಂಟೆ ! ಎಲ್ಲರೂ ಅದಕ್ಕೆ ಒಪ್ಪಿದೆವು . ಮೊದಲಿಗೆ ಚಾರಣದ ವಿವರಗಳು ಈ ರೀತಿಯಾಗಿತ್ತು : ವೈಹೆಚ್ಎಐ ಬೇಸ್ ಕ್ಯಾಂಪ್ - ಪಂಡಿತ್ ದೀನ ದಯಾಳ್ ಉಪಾಧ್ಯಾಯಿ ಪರ್ವತಾ ರೋಹಣ ಸಂಸ್ಥೆ . ●       ವೈಹೆ...

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು ಫೆಬ್ರವರಿ ತಿಂಗಳಿನಲ್ಲಿ ಬಿ.ವಿ.ರಮೇಶ್ ಹಾಗೂ ವೆಂಕಣ್ಣ ಆಚಾರ್ಯ ರವರೊಂದಿಗೆ ಪಶ್ಹಿಮ ಬಂಗಾಳದಲ್ಲಿನ ಸಂಡಕ್ಫೂ ಶಿಖರಾರೋಹಣ ಮಾಡುವ ಮೊದಲೇ ನನ್ನ ಗುಜರಾತ್ ರಾಜ್ಯದಲ್ಲಿನ ಕಛ್ ಪ್ರವಾಸದಲ್ಲಿ ಜಯಂತ್ ರವರಿಗೆ ಮಾತು ಕೊಟ್ಟಂತೆ ಏಪ್ರಿಲ್ ತಿಂಗಳಿನಲ್ಲಿ ಕೇದಾರ್ಕಾಂತ ಶಿಖರಾರೋಹಣ ಮಾಡಲು ತೀರ್ಮಾನಿಸಿ ಅದರಂತೆ ಜನವರಿ ತಿಂಗಳಿನಲ್ಲೇ ಇಂಡಿಯಾ ಹೈಕ್ ರವರಲ್ಲಿ ನನಗೆ ಹಾಗೂ ಶ್ರೀಕಾಂತ್ ಕೊಲ್ಹಾರ ರಿಗೆ ಸ್ಥಳವನ್ನು ಕಾಯ್ದಿರಿಸಿದ್ದೆ. ಹಾಗೂ ಜಯಂತ್ ರವರೂ ಕೂಡ ತಮ್ಮ ಸ್ಥಳವನ್ನು ಕಾದಿರಿಸಿದ್ದರು. ಅದರಂತೆ ನಾನು ಹಾಗೂ ಶ್ರೀಕಾಂತ್ ಮೊದಲೇ ಪ್ರಯಾಣಕ್ಕೆ ಸಂಬಂದಿಸಿದಂತೆ ರೈಲಿನಲ್ಲಿ ಟಿಕೆಟ್ ನ್ನು ಬುಕ್ ಮಾಡಿದ್ದೆವು. ಸ್ವಲ್ಪ ದಿನದ ನಂತರ ನಾವಿಬ್ಬರೂ ಏಪ್ರಿಲ್ ನಲ್ಲೇ ಅಮೆರಿಕ ಪ್ರಯಾಣಮಾಡಬೇಕಾದ ಸಂದರ್ಭ ಬಂದಿದ್ದರಿಂದ ನವದೆಹಲಿಗೆ ರೈಲಿನಲ್ಲಿ ಹೋಗುವ ಬದಲು ವಿಮಾನದಲ್ಲಿ ಪ್ರಯಾಣಿಸಲು ತೀರ್ಮಾನಿಸಿ ಅದರಂತೆ ಟಿಕೆಟ್ ನ್ನು ಬುಕ್ ಮಾಡಿದೆವು. ಅನಂತರ ಫೆಬ್ರವರಿ ತಿಂಗಳಿನಲ್ಲಿ ನನ್ನ ತಮ್ಮ ಅನಂತಮೂರ್ತಿಯ ಮನೆಗೆ ಹೋಗಿದ್ದಾಗ ಈ ವಿಷಯವನ್ನು ತಿಳಿಸಿದಾಗ ಅವನೂ ತಾನು ಹಾಗೂ ಉಮಾ ಸಹ ನಮ್ಮ ಜೊತೆಗೆ ಬರಲು ತೀರ್ಮಾನಿಸಿದರು. ಅದರಂತೆ ಅವರಿಗೂ ಇಂಡಿಯಾ ಹೈಕ್ ನಲ್ಲಿ ಮತ್ತೆರಡು ಸ್ಥಳಗಳನ್ನು ಬುಕ್ ಮಾಡಿ ಡೆಹರಾಡೂನಿಗೆ ಹೋಗಿಬರುವ ಪ್ರಯಾಣವನ್ನು ಬುಕ್ ಮಾಡಿದೆವು. ಅನಂತರ ಮೂರ್ತಿ ಹಾಗೂ ಉಮ...

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ . ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ - ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ , ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ - ಕೇದಾರಗಳಿಗೆ , ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ , ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ - ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು . ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ . ಅದೇ ಕರ್ದಳೀವನ ಪರಿಕ್ರಮ . ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು . ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು . ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು . ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ . ಭಾರತದಲ್ಲಿ ಬಹು ಮುಖ್ಯವಾಗಿ ...