Skip to main content

Posts

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು ಫೆಬ್ರವರಿ ತಿಂಗಳಿನಲ್ಲಿ ಬಿ.ವಿ.ರಮೇಶ್ ಹಾಗೂ ವೆಂಕಣ್ಣ ಆಚಾರ್ಯ ರವರೊಂದಿಗೆ ಪಶ್ಹಿಮ ಬಂಗಾಳದಲ್ಲಿನ ಸಂಡಕ್ಫೂ ಶಿಖರಾರೋಹಣ ಮಾಡುವ ಮೊದಲೇ ನನ್ನ ಗುಜರಾತ್ ರಾಜ್ಯದಲ್ಲಿನ ಕಛ್ ಪ್ರವಾಸದಲ್ಲಿ ಜಯಂತ್ ರವರಿಗೆ ಮಾತು ಕೊಟ್ಟಂತೆ ಏಪ್ರಿಲ್ ತಿಂಗಳಿನಲ್ಲಿ ಕೇದಾರ್ಕಾಂತ ಶಿಖರಾರೋಹಣ ಮಾಡಲು ತೀರ್ಮಾನಿಸಿ ಅದರಂತೆ ಜನವರಿ ತಿಂಗಳಿನಲ್ಲೇ ಇಂಡಿಯಾ ಹೈಕ್ ರವರಲ್ಲಿ ನನಗೆ ಹಾಗೂ ಶ್ರೀಕಾಂತ್ ಕೊಲ್ಹಾರ ರಿಗೆ ಸ್ಥಳವನ್ನು ಕಾಯ್ದಿರಿಸಿದ್ದೆ. ಹಾಗೂ ಜಯಂತ್ ರವರೂ ಕೂಡ ತಮ್ಮ ಸ್ಥಳವನ್ನು ಕಾದಿರಿಸಿದ್ದರು. ಅದರಂತೆ ನಾನು ಹಾಗೂ ಶ್ರೀಕಾಂತ್ ಮೊದಲೇ ಪ್ರಯಾಣಕ್ಕೆ ಸಂಬಂದಿಸಿದಂತೆ ರೈಲಿನಲ್ಲಿ ಟಿಕೆಟ್ ನ್ನು ಬುಕ್ ಮಾಡಿದ್ದೆವು. ಸ್ವಲ್ಪ ದಿನದ ನಂತರ ನಾವಿಬ್ಬರೂ ಏಪ್ರಿಲ್ ನಲ್ಲೇ ಅಮೆರಿಕ ಪ್ರಯಾಣಮಾಡಬೇಕಾದ ಸಂದರ್ಭ ಬಂದಿದ್ದರಿಂದ ನವದೆಹಲಿಗೆ ರೈಲಿನಲ್ಲಿ ಹೋಗುವ ಬದಲು ವಿಮಾನದಲ್ಲಿ ಪ್ರಯಾಣಿಸಲು ತೀರ್ಮಾನಿಸಿ ಅದರಂತೆ ಟಿಕೆಟ್ ನ್ನು ಬುಕ್ ಮಾಡಿದೆವು. ಅನಂತರ ಫೆಬ್ರವರಿ ತಿಂಗಳಿನಲ್ಲಿ ನನ್ನ ತಮ್ಮ ಅನಂತಮೂರ್ತಿಯ ಮನೆಗೆ ಹೋಗಿದ್ದಾಗ ಈ ವಿಷಯವನ್ನು ತಿಳಿಸಿದಾಗ ಅವನೂ ತಾನು ಹಾಗೂ ಉಮಾ ಸಹ ನಮ್ಮ ಜೊತೆಗೆ ಬರಲು ತೀರ್ಮಾನಿಸಿದರು. ಅದರಂತೆ ಅವರಿಗೂ ಇಂಡಿಯಾ ಹೈಕ್ ನಲ್ಲಿ ಮತ್ತೆರಡು ಸ್ಥಳಗಳನ್ನು ಬುಕ್ ಮಾಡಿ ಡೆಹರಾಡೂನಿಗೆ ಹೋಗಿಬರುವ ಪ್ರಯಾಣವನ್ನು ಬುಕ್ ಮಾಡಿದೆವು. ಅನಂತರ ಮೂರ್ತಿ ಹಾಗೂ ಉಮ
Recent posts

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ . ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ - ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ , ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ - ಕೇದಾರಗಳಿಗೆ , ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ , ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ - ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು . ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ . ಅದೇ ಕರ್ದಳೀವನ ಪರಿಕ್ರಮ . ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು . ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು . ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು . ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ . ಭಾರತದಲ್ಲಿ ಬಹು ಮುಖ್ಯವಾಗಿ

ಔoಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು

ಔ o ಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು   ಈ ಮಂದಿರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಟನೆಯದು . ಈ ಮಂದಿರವನ್ನು ಯಾದವ ವಂಶಸ್ಥ ಸ್ಯುನ ಎಂಬುವವನು ಕ್ರಿ . ಶ . 13 ನೇ ಶತಮಾನದಲ್ಲಿ ಮರುನಿರ್ಮಾಣ ಮಾಡಿದನೆಂದು ತಿಳಿದುಬರುತ್ತದೆ . ಮೂಲ ಮಂದಿರವನ್ನು ಪಾಂಡವಾಗ್ರಜ ಯುಧಿಷ್ಠಿರನು 14 ವನವಾಸದ ಸಮಯದಲ್ಲಿ ನಿರ್ಮಿಸಿದನೆಂದೂ ಹಾಗೂ ಔರಂಗಜೇಬನು ಈ ಮಂದಿರವನ್ನು ನಾಶಮಾಡುವ ಸಮಯದಲ್ಲಿ ಇದು ಏಳು ಅಂತಸ್ತಿನಿಂದ ಕೂಡಿತ್ತೆಂದು ಇತಿಹಾಸವು ತಿಳಿಸುತ್ತದೆ . ಈ ಮಂದಿರವನ್ನು ಹೇಮದ್ ಪಂಥಿ ಶೈಲಿಯಲ್ಲಿ ನಿರ್ಮಿಸಲಾಗಿದೆ . ಈ ಮಂದಿರದೊಂದಿಗೆ ಹಿಂದುಗಳ ವಾರ್ಕಾರಿ ಪಂಥದ ಸಂತರುಗಳಾದ ನಾಮದೇವ್ , ವಿಠೋಬ ಖೇಚ್ಛಾ , ಜ್ಞಾನೇಶ್ವರರ ಹೆಸರುಗಳು ಹಾಸುಹೊಕ್ಕಾಗಿದೆ . ಒಮ್ಮೆ ನಾಮದೇವನು , ಸಂತ ವಿಠೋಬನು ಈ ಮಂದಿರದೊಳಗಿರುವ ಶಿವಲಿಂಗದ ಮೇಲೆ ತನ್ನ ಕಾಲನ್ನು ಇಟ್ಟು ಮಲಗಿರುವುದನ್ನು ಕಂಡು ಆಕ್ಷೇಪಿಸಿದನು . ಅದಕ್ಕೆ ವಿಠೋಬನು ನಾಮದೇವನಿಗೆ ತನ್ನ ಕಾಲನ್ನು ಬೇರೆ ಎಲ್ಲಾದರೂ ಇಡಲೆಂದು ಸೂಚಿಸಿದನು . ಹಾಗೇ ಕಾಲನ್ನು ಎಲ್ಲಿ ಇಟ್ಟರೂ ಅಲ್ಲಿ ಕಾಲಿನ ಕೆಳಗೆ ಲಿಂಗವು ಉಧ್ಭವವಾಗುತ್ತಿತ್ತು . ವಿಠೋಬನು ತನ್ನ ಯೋಗಶಕ್ತಿಯಿಂದ ಮಂದಿರದೊಳಗೆಲ್ಲಾ ಲಿಂಗವನ್ನು ಸೃಷ್ಟಿಸಿ ಭಗವಂತನು ಸರ್ವಾ o ತರ್ಯಾಮಿ ಎಂಬ ವಿಷಯವನ್ನು ನಾಮದೇವನಿಗೆ ಮನವರಿಕೆ ಮಾಡಿಕೊಟ್ಟನು . ಈ ಕ್ಷೇತ್ರವನ್ನು ದಾರುಕಾವನವೆಂದೂ ಕರೆಯಲ್ಪಟ್ಟಿದೆ . ಈ ಮಂದಿರದಲ್ಲಿ ಮಹಾದ