Skip to main content

Posts

Showing posts from March, 2019

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ . ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ - ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ , ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ - ಕೇದಾರಗಳಿಗೆ , ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ , ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ - ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು . ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ . ಅದೇ ಕರ್ದಳೀವನ ಪರಿಕ್ರಮ . ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು . ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು . ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು . ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ . ಭಾರತದಲ್ಲಿ ಬಹು ಮುಖ್ಯವಾಗಿ

ಔoಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು

ಔ o ಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು   ಈ ಮಂದಿರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಟನೆಯದು . ಈ ಮಂದಿರವನ್ನು ಯಾದವ ವಂಶಸ್ಥ ಸ್ಯುನ ಎಂಬುವವನು ಕ್ರಿ . ಶ . 13 ನೇ ಶತಮಾನದಲ್ಲಿ ಮರುನಿರ್ಮಾಣ ಮಾಡಿದನೆಂದು ತಿಳಿದುಬರುತ್ತದೆ . ಮೂಲ ಮಂದಿರವನ್ನು ಪಾಂಡವಾಗ್ರಜ ಯುಧಿಷ್ಠಿರನು 14 ವನವಾಸದ ಸಮಯದಲ್ಲಿ ನಿರ್ಮಿಸಿದನೆಂದೂ ಹಾಗೂ ಔರಂಗಜೇಬನು ಈ ಮಂದಿರವನ್ನು ನಾಶಮಾಡುವ ಸಮಯದಲ್ಲಿ ಇದು ಏಳು ಅಂತಸ್ತಿನಿಂದ ಕೂಡಿತ್ತೆಂದು ಇತಿಹಾಸವು ತಿಳಿಸುತ್ತದೆ . ಈ ಮಂದಿರವನ್ನು ಹೇಮದ್ ಪಂಥಿ ಶೈಲಿಯಲ್ಲಿ ನಿರ್ಮಿಸಲಾಗಿದೆ . ಈ ಮಂದಿರದೊಂದಿಗೆ ಹಿಂದುಗಳ ವಾರ್ಕಾರಿ ಪಂಥದ ಸಂತರುಗಳಾದ ನಾಮದೇವ್ , ವಿಠೋಬ ಖೇಚ್ಛಾ , ಜ್ಞಾನೇಶ್ವರರ ಹೆಸರುಗಳು ಹಾಸುಹೊಕ್ಕಾಗಿದೆ . ಒಮ್ಮೆ ನಾಮದೇವನು , ಸಂತ ವಿಠೋಬನು ಈ ಮಂದಿರದೊಳಗಿರುವ ಶಿವಲಿಂಗದ ಮೇಲೆ ತನ್ನ ಕಾಲನ್ನು ಇಟ್ಟು ಮಲಗಿರುವುದನ್ನು ಕಂಡು ಆಕ್ಷೇಪಿಸಿದನು . ಅದಕ್ಕೆ ವಿಠೋಬನು ನಾಮದೇವನಿಗೆ ತನ್ನ ಕಾಲನ್ನು ಬೇರೆ ಎಲ್ಲಾದರೂ ಇಡಲೆಂದು ಸೂಚಿಸಿದನು . ಹಾಗೇ ಕಾಲನ್ನು ಎಲ್ಲಿ ಇಟ್ಟರೂ ಅಲ್ಲಿ ಕಾಲಿನ ಕೆಳಗೆ ಲಿಂಗವು ಉಧ್ಭವವಾಗುತ್ತಿತ್ತು . ವಿಠೋಬನು ತನ್ನ ಯೋಗಶಕ್ತಿಯಿಂದ ಮಂದಿರದೊಳಗೆಲ್ಲಾ ಲಿಂಗವನ್ನು ಸೃಷ್ಟಿಸಿ ಭಗವಂತನು ಸರ್ವಾ o ತರ್ಯಾಮಿ ಎಂಬ ವಿಷಯವನ್ನು ನಾಮದೇವನಿಗೆ ಮನವರಿಕೆ ಮಾಡಿಕೊಟ್ಟನು . ಈ ಕ್ಷೇತ್ರವನ್ನು ದಾರುಕಾವನವೆಂದೂ ಕರೆಯಲ್ಪಟ್ಟಿದೆ . ಈ ಮಂದಿರದಲ್ಲಿ ಮಹಾದ

ಮುಕ್ತಾ ಶಿಖರ - ಹಿಮಾಲಯದಲ್ಲಿನ ಒಂದು ನವೀನ ಚಾರಣ ಮಾರ್ಗ.

ಮುಕ್ತಾ ಶಿಖರ - ಹಿಮಾಲಯದಲ್ಲಿನ ಒಂದು ನವೀನ ಚಾರಣ ಮಾರ್ಗ . ಈ ಚಾರಣವು ಚಳಿಗಾಲದ ಕೇದಾರಕಾಂತ , ದಯಾರ ಬುಗ್ಯಾಲ್ , ಹಾಗೂ ಚಂದ್ರಶಿಲಾ ಗುಂಪಿಗೆ ಸೇರಿದ ಉತ್ತರಾಖಂಡದಲ್ಲಿನ ನೂತನ ಚಾರಣ ಮಾರ್ಗ . ಇದು ಒಂದು ಅತ್ಯಂತ ಸುಂದರ ಹಾಗೂ ಅದ್ಭುತವಾದ ಚಾರಣ ಮತ್ತು ಈ ಚಾರಣದಲ್ಲಿ ಚಾರಣಿಗರನ್ನು ಮೋಡಿಮಾಡುವ ಅರಣ್ಯಗಳು , ಹುಲ್ಲುಗಾವಲುಗಳು , ಭವ್ಯವಾದ ಪರ್ವತ ಶಿಖರಗಳ ನೋಟಗಳು ಮತ್ತು ಅತ್ಯಂತ ತೃಪ್ತಿಕರವಾದ ಶಿಖರಾರೋಹಣದಿಂದ ಕೂಡಿದ್ದು ಹಾಗೂ ಇದು ಸಂಪೂರ್ಣವಾಗಿ ನಿರ್ಜನವಾದದ್ದು . ಅದೇ ಮುಕ್ತಾ ಶಿಖರ . ಬೇರೆ ಚಾರಣಗಳಂತಲ್ಲದೆ , ಇದು ಸ್ವಲ್ಪ ಕೆಳಮಟ್ಟದಿಂದ ಪ್ರಾರಂಭವಾಗುವುದು . ಹೀಗಾಗಿ ಇದು ಚಾರಣಿಗರು ಹಿಮಾಲಯದಲ್ಲಿನ ಸಂಪೂರ್ಣವಾಗಿ ಬೇರೆಯದೇ ಆದ ಕಾಡುಗಳನ್ನು ವೀಕ್ಷಿಸಲು ಅನುವು ಮಾಡಿಕೊಡುವುದು . ಉದಾಹರಣೆಗೆ , ಈ ಮಾರ್ಗದಲ್ಲಿ ಬಿದಿರಿನಿಂದ ಕೂಡಿದ ಕಾಡು ಒಂದು ವೈಶಿಷ್ಟ್ಯತೆಯಿಂದ ಕೂಡಿದ್ದು . ಮೇಲೆ ಮೇಲೆ ಚಾರಣ ಮಾಡುತ್ತಿದ್ದಂತೆ ನಮಗೆ ರೋಡೋಡೆಂಡ್ರಾನ್ , ಮ್ಯಾಪಲ್ , ಪುರಾತನ ಓಕ್ ಹಾಗೂ ಪೈನ್ ವೃಕ್ಷಗಳು ಎದುರಾಗುವುದು . ಇಲ್ಲಿನ ಕಾಡುಗಳು ಅತ್ಯಂತ ದಟ್ಟವಾಗಿರುವುದು . ಮತ್ತೊಂದು ವೈಶಿಷ್ಟ್ಯವೆಂದರೆ ಈ ಚಾರಣದಲ್ಲಿ ಸಂಪೂರ್ಣವಾಗಿ ಎರಡು ದಿನಗಳು ಕಾಡಿನಲ್ಲೇ ನಡೆಯಬೇಕು . ಬೇರೆ ಚಾರಣಗಳಲ್ಲಿ 3-4 ಘಂಟೆಗಳ ಕಾಡಿನ ನಡಿಗೆ ಇರುವುದು . ಇದರಲ್ಲಿನ ಲಾಭವೆಂದರೆ ಮರಗಳ ನೆರಳಿನಲ್ಲಿ ಚಾರಣ ಮಾಡುವುದು . ಇತ್ತೀಚಿನ ದ