Skip to main content

ಔoಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು


oಧ್ ನಾಗನಾಥ ಮಂದಿರದ ಬಗ್ಗೆ ಕೆಲವು ವಿವರಗಳು 

ಈ ಮಂದಿರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಟನೆಯದು. ಈ ಮಂದಿರವನ್ನು ಯಾದವ ವಂಶಸ್ಥ ಸ್ಯುನ ಎಂಬುವವನು ಕ್ರಿ.. 13ನೇ ಶತಮಾನದಲ್ಲಿ ಮರುನಿರ್ಮಾಣ ಮಾಡಿದನೆಂದು ತಿಳಿದುಬರುತ್ತದೆ. ಮೂಲ ಮಂದಿರವನ್ನು ಪಾಂಡವಾಗ್ರಜ ಯುಧಿಷ್ಠಿರನು 14 ವನವಾಸದ ಸಮಯದಲ್ಲಿ ನಿರ್ಮಿಸಿದನೆಂದೂ ಹಾಗೂ ಔರಂಗಜೇಬನು ಈ ಮಂದಿರವನ್ನು ನಾಶಮಾಡುವ ಸಮಯದಲ್ಲಿ ಇದು ಏಳು ಅಂತಸ್ತಿನಿಂದ ಕೂಡಿತ್ತೆಂದು ಇತಿಹಾಸವು ತಿಳಿಸುತ್ತದೆ. ಈ ಮಂದಿರವನ್ನು ಹೇಮದ್ ಪಂಥಿ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಮಂದಿರದೊಂದಿಗೆ ಹಿಂದುಗಳ ವಾರ್ಕಾರಿ ಪಂಥದ ಸಂತರುಗಳಾದ ನಾಮದೇವ್, ವಿಠೋಬ ಖೇಚ್ಛಾ, ಜ್ಞಾನೇಶ್ವರರ ಹೆಸರುಗಳು ಹಾಸುಹೊಕ್ಕಾಗಿದೆ.

ಒಮ್ಮೆ ನಾಮದೇವನು, ಸಂತ ವಿಠೋಬನು ಈ ಮಂದಿರದೊಳಗಿರುವ ಶಿವಲಿಂಗದ ಮೇಲೆ ತನ್ನ ಕಾಲನ್ನು ಇಟ್ಟು ಮಲಗಿರುವುದನ್ನು ಕಂಡು ಆಕ್ಷೇಪಿಸಿದನು. ಅದಕ್ಕೆ ವಿಠೋಬನು ನಾಮದೇವನಿಗೆ ತನ್ನ ಕಾಲನ್ನು ಬೇರೆ ಎಲ್ಲಾದರೂ ಇಡಲೆಂದು ಸೂಚಿಸಿದನು. ಹಾಗೇ ಕಾಲನ್ನು ಎಲ್ಲಿ ಇಟ್ಟರೂ ಅಲ್ಲಿ ಕಾಲಿನ ಕೆಳಗೆ ಲಿಂಗವು ಉಧ್ಭವವಾಗುತ್ತಿತ್ತು. ವಿಠೋಬನು ತನ್ನ ಯೋಗಶಕ್ತಿಯಿಂದ ಮಂದಿರದೊಳಗೆಲ್ಲಾ ಲಿಂಗವನ್ನು ಸೃಷ್ಟಿಸಿ ಭಗವಂತನು ಸರ್ವಾoತರ್ಯಾಮಿ ಎಂಬ ವಿಷಯವನ್ನು ನಾಮದೇವನಿಗೆ ಮನವರಿಕೆ ಮಾಡಿಕೊಟ್ಟನು.

ಈ ಕ್ಷೇತ್ರವನ್ನು ದಾರುಕಾವನವೆಂದೂ ಕರೆಯಲ್ಪಟ್ಟಿದೆ. ಈ ಮಂದಿರದಲ್ಲಿ ಮಹಾದೇವನ ಮುಂದೆ ನಂದಿ ವಿಗ್ರಹವಿಲ್ಲ. ಮಂದಿರದ ಹಿಂಭಾಗದಲ್ಲಿ ನಂದಿಕೇಶ್ವರನ ಮಂದಿರವಿದೆ. ಮಂದಿರದಲ್ಲಿನ ನಾಲ್ಕೂ ಭಾಗಗಳಲ್ಲಿ ಎಲ್ಲ ಜ್ಯೋತಿರ್ಲಿಂಗಗಳ ಸಣ್ಣ ಸಣ್ಣ ಮಂದಿರಗಳಿವೆ. ಇದಲ್ಲದೇ - ವೇದವ್ಯಾಸ ಲಿಂಗ, ಭದ್ರೇಶ್ವರ, ನೀಲಕಂಠೇಶ್ವರ್ರ, ಗಣಪತಿ, ದತ್ತಾತ್ರೇಯ, ಮುರಳೀಮನೋಹರ ಹಾಗೂ ದಶಾವಾತಾರ ಮಂದಿರಗಳಿವೆ. ಈ ಕ್ಷೇತ್ರದಲ್ಲಿ ಒಟ್ಟು 108 ಶಿವಮಂದಿರಗಳು ಹಾಗೂ  68 ಪೂಜಾಸ್ಥಳಗಳು ಇರುವುದು. ಮಂದಿರದೊಳಗೆ ಋಣಮೋಚನ ತೀರ್ಥ ಇಂಬ ಪೂಜಾಸ್ಥಳ ಇರುವುದು.

ಮಂದಿರದ ಒಂದು ತುದಿಯಲ್ಲಿ ಪಾರ್ವತಿಯನ್ನು ಶಿವನು ಸಂತೈಸುವ ಒಂದು ಬೃಹತ್ ಹಾಗೂ ಮನೋಹರವಾದ ವಿಗ್ರಹವಿರುವುದು.

ನಾಂದೇಡ್ ಬಗ್ಗೆ ಕೆಲವು ವಿವರಣೆಗಳು 

ನಾಂದೇಡ್ ಸ್ಥಳವು ಸಿಖ್ಖರಿಗೆ ಅತ್ಯಂತ ಪುಣ್ಯ ಕ್ಷೇತ್ರ. ಈ ಪ್ರದೇಶವನ್ನು ಸಿಖ್ಖರ ಹತ್ತನೇ ಗುರುಗಳಾದ ಗುರು ಗೋವಿಂದ ಸಿಂಗ್ ಶಾಶ್ವತವಾಗಿ ನೆಲಸಲು ಆರಿಸಿಕೊಂಡಿದ್ದರು ಹಾಗೂ ಗುರು ಪೀಠವನ್ನು ತಮ್ಮ ಅವಸಾನಕ್ಕೆ ಮೊದಲೇ ಕ್ರಿ..1708 ರಲ್ಲಿ ಗುರು ಗ್ರಂಥ ಸಾಹಿಬಿಗೆ ವರ್ಗಾಯಿಸಿದರು.

ನಾಂದೇಡ್ ನಗರವು ಗೋದಾವರಿ ನದಿಯ ದಡದಲ್ಲಿದ್ದು ಇಲ್ಲಿನ ಊರ್ವಶಿ ಘಾಟ್, ರಾಮ ಘಾಟ್, ಗೋವರ್ಧನ ಘಾಟ್ ಪ್ರಸಿದ್ಧವಾದವುಗಳು. ಇಲ್ಲಿನ ಗುರುದ್ವಾರವನ್ನು 1835 ರಲ್ಲಿ ಮಹಾರಾಜ ರಣಜಿತ್ ಸಿಂಗ್ ನಿರ್ಮಿಸಿದನು.

ಇಲ್ಲಿನ ಸುಪ್ರಸಿದ್ದ ಮಂದಿರಗಳೆಂದರೆ - ಕಾಲೇಶ್ವರ, ಶನೇಶ್ವರ, ರೇಣುಕಾ ಮಾತಾ.

ಇಲ್ಲಿನ ತ್ರಿಕೂಟ ಗ್ರಾಮವು ಗೋದಾವರಿ ನದಿಯ ನಾಭಿ ಸ್ಥಾನದಲ್ಲಿದೆ.

ನಾಂದೇಡ್ ಸಮೀಪದ ಹೊಟ್ಟಾಲ್ ಗ್ರಾಮದಲ್ಲಿರುವ ಸಿದ್ದೇಶ್ವರ ಮಂದಿರವನ್ನು ಚಾಲುಕ್ಯರು ಹೇಮಪಂಥೀ ಶ್ಯೆಲಿಯಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ.

ದೇಗರ್ಲು ತಾಲ್ಲೂಕಿನ ತಾಡ್ ಖೇಲ್ ಗ್ರಾಮದಲ್ಲಿ ಅಗಾಧವಾದ ಕಲ್ಲುಗಳಿಂದ ಪುರಾತನ ಶ್ಯೆಲಿಯಲ್ಲಿ ಸೇನಾಪತಿ ಎಂಬ ಅರಸನು ಹಲವಾರು ಶತಮಾನಗಳ ಹಿಂದೆ ಶಿವನ ಮಂದಿರವನ್ನು ನಿರ್ಮಿಸಿರುವನು. ಇದಲ್ಲದೇ ಈ ಗ್ರಾಮದಲ್ಲಿ ಚಂದ್ರಾಪುರ ಹಾಗೂ ಜಗದಂಬಾ ಡಂದಿರಗಳು ಇರುವುದು.

$$$$$$$$$$$ 






ಮಾಹುರ, ಮಹಾರಾಷ್ಟ್ರದ ಬಗ್ಗೆ ಕೆಲವು ಮಾಹಿತಿಗಳು

ಈ ಪುಣ್ಯಸ್ಥಳವು ಸದ್ಗುರು ದತ್ತಾತ್ರೇಯರು ಜನ್ಮ ತಾಳಿದ ಅತ್ಯಂತ ಪವಿತ್ರ ಕ್ಷೇತ್ರ. ಇಲ್ಲಿ ಮೂರು ಬೆಟ್ಟಗಳಿರುವುದು:

ರೇಣುಕಾದೇವಿ ಶಿಖರ, ದತ್ತ ಶಿಖರ, ಹಾಗೂ  ಅತ್ರಿ ಅನಸೂಯಾ ಶಿಖರ.

ಈ ಕ್ಷೇತ್ರವನ್ನು ಒಂದು ಶಕ್ತಿ ಪೀಠವೆಂದು ಪರಿಗಣಿಸಲಾಗಿದೆ. ಉಳಿದ ಮಂದಿರಗಳೆಂದರೆ:
ದತ್ತಾತ್ರೇಯ ಮಂದಿರ, ಅನಸೂಯಾ ಮಂದಿರ, ದೇವ-ದೇವೇಶ್ವರ ಮಂದಿರ, ಪರಶುರಾಮ ಮಂದಿರ, ಹಾಥಿ ದರ್ವಾಝ, ಬಾಲ ಸಮುದ್ರ, ಪಾಂಡವ ಲೇನಿ, ಸರ್ವ ತೀರ್ಥ, ಮಾತೃ ತೀರ್ಥ, ಭಾನು ತೀರ್ಥ, ಮಹಾಕಾಳಿ ಮಂದಿರವು ಮಾಹುರ್ಗಡ ಬೆಟ್ಟದಲ್ಲಿರುವುದು, ಮಾಹುರ ವಸ್ತು ಸಂಗ್ರಹಾಲಯ, ಸೋನರ್ಪಿ ದರ್ಗಾ, ಶೇಖ್ ಫ್ಹರೀದ್ ಜಲಪಾತ (ವಾಝುರಾ), ರಾಜೀ ಉದರಂ ಅರಮನೆ ಹಾಗೂ ಉಂಕೇಶ್ವರ ಬಿಸಿ ನೀರಿನ ಬುಗ್ಗೆ - ಮಾಹುರದಿಂದ 50 ಕಿ.ಮೀ.  

ದೇವ-ದೇವೇಶ್ವರ ಕ್ಷೇತ್ರವನ್ನು ಮೂಲದಲ್ಲಿ ಜಗದ್ಗುರು ದತ್ತಾತ್ರೇಯರ ನಿದ್ರಾಸ್ಥಾನವೆಂದು ಕರೆಯಲಾಗುತ್ತದೆ. ಇದು ಮಾಹುರ ಬಸ್ ನಿಲ್ದಾಣದಿಂದ ಕೇವಲ 2 ಕಿ.ಮೀ. ದೂರದಲ್ಲಿದೆ.
ದತ್ತ ಚರಿತ್ರೆಯ ಉಲ್ಲೇಖದ ಪ್ರಕಾರ ಸದ್ಗುರುಗಳು ಪ್ರತಿನಿತ್ಯ ಮುಂಜಾನೆ ಮಾಹುರದಲ್ಲಿರುವ ಮೇರುವಾಡ ಕೊಳದಲ್ಲಿ ಸ್ನಾನಮಾಡಿ ಕೊಲ್ಹಾಪುರದಲ್ಲಿ ಭಿಕ್ಷೆ ಪಡೆದು ಪಾಂಚಾಲೇಶ್ವರದಲ್ಲಿ ಭೋಜನವನ್ನು ಸ್ವೀಕರಿಸಿ ರಾತ್ರೆ ನಿದ್ರಿಸಲು ಮಾಹುರದಲ್ಲಿನ ದೇವ-ದೇವೇಶ್ವರ ಮಂದಿರಕ್ಕೆ ಬರುತ್ತಿದ್ದರೆಂದು ವಿವರಿಸಲಾಗಿದೆ. ಸದ್ಗುರುಗಳು ಚಿರಂಜೀವಿಗಳಾದ್ದರಿಂದ ಈಗಲೂ ದತ್ತ ಪ್ರಭುಗಳು ಈ ಮಂದಿರದಲ್ಲಿ ರಾತ್ರೆ ನಿದ್ರಿಸುತ್ತಾರೆಂಬ ಅಚಲವಾದ ನಂಬಿಕೆ.

ರೇಣುಕಾದೇವಿ ಕ್ಷೇತ್ರದ ಬಗ್ಗೆ ಪೌರಾಣಿಕ ಹಿನ್ನೆಲೆ - ಮೊದಲನೆಯದು: 
ಜಮದಗ್ನಿ ಋಷಿಗಳು ತಮ್ಮ ಪತ್ನಿ ರೇಣುಕಾದೇವಿಯೊಡನೆ ಈಗಿನ ತೆಲಂಗಾಣಾ ರಾಜ್ಯದಲ್ಲಿನ ಒಂದು ವನದಲ್ಲಿ ವಾಸಿಸುತ್ತಿದ್ದಾಗ ಸಹಸ್ರಾರ್ಜುನನೆಂಬ ಕ್ಷತ್ರಿಯನು ಆಶ್ರಮದಲ್ಲಿದ್ದ ಕಾಮಧೇನು ಹಸುವನ್ನು ಪಡೆಯಲು ಅಲ್ಲಿಗೆ ಬಂದಾಗ ಒಬ್ಬಳೇ ಇದ್ದ ರೇಣುಕಾದೇವಿಯನ್ನು ಕಂಡು ಅವಳನ್ನು ಬಲಾತ್ಕಾರ ಮಾಡಲು ಪ್ರಯತ್ನಿಸಿದಾಗ ಅವಳು ತೀವ್ರವಾಗಿ ಪ್ರತಿಭಟಿಸಿದಳು. ಆಗ ಸಹಸ್ರಾರ್ಜುನನು ಅವಳ ಮೇಲೆ ಮಾರಣಾoತಿಕವಾಗಿ ಹಲ್ಲೆ ಮಾಡಿದನು. ಇದರಿಂದ ರೇಣುಕಾದೇವಿಯು ಸಾವನ್ನಪ್ಪಿದಳು. ಈ ವಿಷಯವನ್ನರಿತ ಪರಶುರಾಮನು ಕ್ರೋಧಿತನಾಗಿ ಸಹಸ್ರಾರ್ಜುನನನ್ನು ಬೆನ್ನಟ್ಟಿ ಹೋಗಲು, ಆಗ ಹಿರಿಯರು ಅವನನ್ನು ಸಂತೈಸಿ ತಾಯಿಯ ಅಂತ್ಯ ಕ್ರಿಯೆಗಳನ್ನು ಮಾಹುರ ಕ್ಷೇತ್ರದಲ್ಲಿ ಸದ್ಗುರು ದತ್ತಾತ್ರೇಯರ ಮಾರ್ಗದರ್ಶನದಲ್ಲಿ ಮಾಡಬೇಕೆಂದೂ ಹಾಗೂ ಆ ಸಮಯದಲ್ಲಿ ಮಾತೆ ರೇಣುಕಾದೇವಿಯು ಮಾಹುರದಲ್ಲಿನ ಮೊದಲನೆಯ ಬೆಟ್ಟದ ಮೇಲೆ ಕಾಣಿಸಿಕೊಳ್ಳುವಳೆಂದು ತಿಳಿಸಿದರು. ಅದರಂತೆ ಪರಶುರಾಮರು ತಾಯಿಯ ಅಂತ್ಯಕ್ರಿಯೆಗಳನ್ನು ಮಾಡಿ ಮುಗಿಸಿದರು ಅಲ್ಲದೆ ಬೆಟ್ಟದ ಮೇಲೆ ಮಾತೆಯನ್ನು ಪೂಜಿಸಿದರು. ಹಾಗಾಗಿ ಬೆಟ್ಟದ ಮೇಲಿನ ಮಂದಿರವು ರೇಣುಕಾದೇವಿ ಮಂದಿರವೆಂದು ಪ್ರಸಿದ್ಧಿಯಾಯಿತು ಹಾಗೂ ಇಲ್ಲಿರುವ ಕೊಳವು ಮಾತೃ ತೀರ್ಥವೆಂದು ಅಥವಾ ಅಂತ್ಯೇಷ್ಟಿ ಸ್ಥಾನವೆಂದು ಕರೆಯಲ್ಪಟ್ಟಿತು.

ಎರಡನೆಯ ಪೌರಾಣಿಕ ಹಿನ್ನೆಲೆ:

ಪರಶುರಾಮನು ತನ್ನ ತಂದೆ ಜಕದಗ್ನಿಯ ಆದೇಶದ ಮೇರೆಗೆ ತಾಯಿ ರೇಣುಕಾದೇವಿಯ ಶಿರಚ್ಚೇದನ ಮಾಡಿದಾಗ ಆಕೆಯ ಶಿರವು ಮಾಹುರ ಬೆಟ್ಟದ ಮೇಲೆ ಬಿದ್ದಿತೆಂದೂ ನಂತರ ಜಮದಗ್ನಿಯು ಪರಶುರಾಮನ ಪಿತೃವಾಕ್ಯ ಪಾಲನೆಗೆ ಮೆಚ್ಚಿ ನೀಡಿದ ವರದ ಪರಿಣಾಮವಾಗಿ ರೇಣುಕಾದೇವಿಯು ಮರಳಿ ಜೀವವನ್ನು ಪಡೆಯುತ್ತಾಳೆ.  ಹಾಗಾಗಿ ಈ ಕ್ಷೇತ್ರವನ್ನು ಶಕ್ತಿ ಪೀಠವೆಂದು ಪರಿಗಣಿಸಲಾಗುತ್ತದೆ ಹಾಗೂ ಇಲ್ಲಿನ ಶಕ್ತಿಯು ರೇಣುಕಾದೇವಿ.

ಐತಿಹಾಸಿಕ ಹಿನ್ನೆಲೆ:
ಕ್ರಿ.. 12ನೇ ಶತಮಾನದಲ್ಲಿ ಇಲ್ಲಿ ಮಾಹುರ ಘಡ ಕೋಟೆಯನ್ನು ನಿರ್ಮಿಸಲಾಯಿತು. ಕ್ರಿ.. 1478 ರಲ್ಲಿ ಈ ಪ್ರದೇಶವು ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತು. ನಂತರ ಇದನ್ನು ಅಕ್ಬರನು ಮೊಗಲರ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.

Comments

Popular posts from this blog

ರಾಷ್ಟ್ರೀಯ ಗಿರ್ ಅನ್ವೇಷಣಾ ಹಾಗೂ ಚಾರಣ ಮತ್ತು ತರಬೇತಿ ಕಾರ್ಯ ಯಾತ್ರೆ 2018

ರಾಷ್ಟ್ರೀಯ ಗಿರ್ ಅನ್ವೇಷಣಾ ಹಾಗೂ ಚಾರಣ ಮತ್ತು ತರಬೇತಿ ಕಾರ್ಯ ಯಾತ್ರೆ 2018 ನವೆಂಬರ್ 2018 ರಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯ ಗುಜರಾತ್ ಶಾಖೆಯ ಕಾರ್ಯದರ್ಶಿಯಾದ ಶ್ರೀ ಅನಂತ್ ಪಾರಮಾರ್ ಅವರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ನಿವೃತ್ತರಾದ ಐದು ಜನ ಅಧಿಕಾರಿಗಳಿಗೆ ಜುನಾಘಡ್ ನಲ್ಲಿನ ಪರ್ವತ ಪ್ರದೇಶದಲ್ಲಿ ಚಾರಣ ಮಾಡಲು ವಿಶೇಷವಾದ ಆಹ್ವಾನ ಬಂದಿತು . ಈ ಐದು ನಿವೃತ್ತ ಅಧಿಕಾರಿಗಳೆಂದರೆ ಸರ್ವಶ್ರೀ . ಪಾಲಹಳ್ಳಿ ರಮೇಶ , ಕೆ . ವೆಂಕಯ್ಯಸುಬ್ಬಯ್ಯ , ಸುರೇಶ ಬಾಬು , ಹೆಚ್ . ಆರ್ . ಗುರುರಾಜ್ ಹಾಗೂ ಈ ಲೇಖನ ಪ್ರಸ್ತುತಿ ಪಡಿಸುತ್ತಿರುವ ಗುರುಪ್ರಸಾದ್ ಹಾಲ್ಕುರಿಕೆ . ಈ ಆಹ್ವಾನ ಬರಲು ತೆರೆ ಮರೆಯಲ್ಲಿ ಕೆಲಸಮಾಡಿದವರೆ ಶ್ರೀ . ರಮೇಶ್ . ಈ ಚಾರಣದ ಬಗ್ಗೆ ಚರ್ಚಿಸಲು ಐದೂ ಜನರು ಒಂದೆಡೆ ಸೇರಿದೆವು . ರಮೇಶ್ ಅವರು ಚಾರಣದ ಜೊತೆಗೆ ಸುತ್ತ ಮುತ್ತಲಿನ ಕೆಲವು ತೀರ್ಥ ಕ್ಷೇತ್ರ ಹಾಗೂ ಚಾರಿತ್ರಿಕ ಸ್ಥಳಗಳನ್ನೂ ಸಂದರ್ಶಿಸಬಹುದೆಂದು ಸಲಹೆ ನೀಡಿದರು . ರಮೇಶನು ಹೇಳಿದನೆಂದ ಮೇಲೆ ಅದರ ಬಗ್ಗೆ ಬೇರೆಯವರು ಮಾತನಾಡುವುದುಂಟೆ ! ಎಲ್ಲರೂ ಅದಕ್ಕೆ ಒಪ್ಪಿದೆವು . ಮೊದಲಿಗೆ ಚಾರಣದ ವಿವರಗಳು ಈ ರೀತಿಯಾಗಿತ್ತು : ವೈಹೆಚ್ಎಐ ಬೇಸ್ ಕ್ಯಾಂಪ್ - ಪಂಡಿತ್ ದೀನ ದಯಾಳ್ ಉಪಾಧ್ಯಾಯಿ ಪರ್ವತಾ ರೋಹಣ ಸಂಸ್ಥೆ . ●       ವೈಹೆಚ್ಎಐ ಬೇಸ್ ಕ್ಯಾಂಪ್ - ಸಕ್

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ . ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ - ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ , ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ - ಕೇದಾರಗಳಿಗೆ , ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ , ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ - ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು . ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ . ಅದೇ ಕರ್ದಳೀವನ ಪರಿಕ್ರಮ . ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು . ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು . ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು . ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ . ಭಾರತದಲ್ಲಿ ಬಹು ಮುಖ್ಯವಾಗಿ

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು

ಅಮೆರಿಕದಲ್ಲಿನ ನನ್ನ ಚಾರಣದ ಅನುಭವಗಳು ಏಪ್ರಿಲ್ 22 ರಂದು ಸ್ಯಾನ್ ಫ್ರಾನ್ಸಿಸ್ಕೊ   ವಿಮಾನದಲ್ಲಿ ಬಂದು ಅಲ್ಲಿಂದ 40 ಮೈಲಿ ದೂರದ ಸನ್ನಿವೇಲ್ ನಗರಕ್ಕೆ ಬಂದು ನನ್ನ ಮಗನ ಮನೆಗೆ ತಲುಪಿದ ನಂತರ ಎರಡು ದಿನ ವಿಶ್ರಾ o ತಿಯ ನಂತರ ಶನಿವಾರದಂದು ನನ್ನನ್ನು   ನನ್ನ ಮಗನು ಇಲ್ಲಿಂದ 40 ಮೈಲಿ ದೂರದಲ್ಲಿರುವ ಲ್ಯಾಂಡ್ ಆಫ್ ಮೆಡಿಸನ್ ಬುದ್ಧ ಎಂಬ ಸುಂದರ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದನು . ಅಲ್ಲಿಗೆ ಹೋಗುವ ಮೊದಲು ಆ ಪ್ರದೇಶದ ಬಗ್ಗೆ ಕೆಲವು ವಿವರಗಳನ್ನು ಇಂಟರ್ನೆಟ್ ಮೂಲಕ ತಿಳಿದುಕೊಂಡೆ . ಅದರ ಸಂಕ್ಷಿಪ್ತ ವಿವರಣೆ ಹೀಗಿದೆ : ಈ ಪ್ರದೇಶವು ಸಾಂತಾಕ್ರೂಜ್ ಪರ್ವತದ ತಪ್ಪಲಿನಲ್ಲಿರುವ ಸೋಕ್ವಿಲ್ ಹಳ್ಳಿಯಿಂದ ಒಂದೂವರೆ ಮೈಲಿ ದೂರದಲ್ಲಿ ಸುಂದರ ಅರಣ್ಯ ಪ್ರದೇಶದಲ್ಲಿದೆ . ಇಲ್ಲಿ ಉಪನ್ಯಾಸ , ಧ್ಯಾನ , ಪ್ರಾರ್ಥನೆ , ಏಕಾಂತದಲ್ಲಿ ಉಳಿದುಕೊಳ್ಳುವ ಅನುಕೂಲವುಳ್ಳ ಹಾಗೂ ಸಮುದಾಯ ಸೇವೆಯ ಕಾರ್ಯಕ್ರಮಗಳನ್ನು ನಡೆಸಲಾಗುವುದು . ಹೆಸರೇ ಹೇಳಿರುವಂತೆ ಇದು ಮಹಾಯಾನ ಬೌದ್ಧ ಪರಂಪರೆಗೆ ಸೇರಿದ್ದು . ಇಲ್ಲಿ 6 ಮೈಲಿ ಸುತ್ತಳತೆಯ ಚಾರಣ ಮಾಡಲು ಹಾದಿಯಿರುವ (TREKKING TRAIL) ವಿಷಯವನ್ನು ತಿಳಿದು ಅಲ್ಲಿ ಕೆಲವು ದೂರ ನಡೆದೆವು . ಈ ಹಾದಿಯು ಕಡಿದಾದ ಏರುವಿಕೆಯನ್ನು ಹೊಂದಿದ್ದು ನನ್ನ ಪತ್ನಿಗೆ ಬಹಳ ದೂರ ನಡೆಯಲು ಸಾಧ್ಯವಾಗದಿದ್ದರಿಂದ 2 ಮೈಲಿ ನಡೆದು ಮರಳಿದೆವು . ಅಲ್ಲಿ ಕಂಡ ಕೆಲವು ಸುಂದರ ದೃಶ್ಯಗಳನ್ನು ಈ ಕೆಳಗೆ ನೋಡಿರಿ