ಸಪ್ಟೆಂಬರ್ ೨೩ ರಂದು ಬೆಳಗಿನ ವಿಮಾನದಲ್ಲಿ ಹೊರಟು ಮಧ್ಯಾನ್ಹ ದೆಹಲಿ ತಲುಪಿ ಅಲ್ಲಿಂದ ಹರಿದ್ವಾರದೆಡೆಗೆ ರೈಲಿನಲ್ಲಿ ಪ್ರಯಾಣಿಸಿ ರಾತ್ರೆ ೮ ಕ್ಕೆ ತಲುಪಿದೆವು. ಯಥಾಪ್ರಕಾರ ಮೊದಲೇ ಕಾಯ್ದಿರಿಸಿದ್ದ IRCTC ತಂಗು ಕೋಣೆಯಲ್ಲಿ ರಾತ್ರೆಯನ್ನು ಕಳೆದೆವು. ಹರಿದ್ವಾರದಲ್ಲಿ ವೇ.ಸು ವನ್ನು ಒಂದು ಉತ್ತಮ ಹೋಟೆಲಿಗೆ ಕರೆದೊಯ್ದು ಬಿಸಿ ಬಿಸಿ ಇಡ್ಲಿ, ದೋಸೆಯ ರುಚಿಯನ್ನು ತೋರಿಸಿದೆ. 
೨೪ರ ಬೆಳಗ್ಗೆ ೫.೦ ಘoಟೆಗೆ ಎದ್ದು ಬಿರ್ಲಾ ಘಾಟ್ ಗೆ ಹೋಗಿ ಗಂಗಾ ಸ್ನಾನವನ್ನು ಮಾಡಿ ನಂತರ ೬.೩೦ ಕ್ಕೆ ರೈಲು ನಿಲ್ದಾಣದ ಮುಂಭಾಗದಲ್ಲಿ ನಮಗಾಗಿ ಕಾಯುತ್ತಿದ್ದ ವಾಹನವನ್ನು ತಲುಪಿ ಅಲ್ಲಿ ಉಳಿದ ೭ ಜನರ ಪರಿಚಯದ ನಂತರ AULI ಕಡೆಗೆ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದೆವು. ದಾರಿಯಲ್ಲಿ ಒಂದು ಹೋಟೆಲಿನಲ್ಲಿ ಬಿಸಿ ಬಿಸಿ ಆಲೂ ಪರಾಠವನ್ನು ತಿಂದು ನಂತರ ೧೦.೩೦ರ ಹೊತ್ತಿಗೆ ದೇವಪ್ರಯಾಗವನ್ನು ತಲುಪಿದೆವು. ಅಲ್ಲಿ ನಾನು, ವೇ.ಸು, ಸತ್ಯ ಹಾಗೂ ವಿವೇಕ್ ರಸ್ತೆಯಿಂದ ಕೆಳಗಿಳಿದು ನದಿಯ ಮೇಲಿನ ಸೇತುವೆಯನ್ನು ದಾಟಿ ಅಲಕನಂದಾ ಹಾಗೂ ಭಾಗೀರತಿನದಿಗಳು ಸೇರುವ ಸಂಗಮವನ್ನು ತಲುಪಿ ಅಲ್ಲಿ ನದಿಯ ನೀರಿನಲ್ಲಿ ಕೈ ಕಾಲುಗಳನ್ನು ತೊಳೆದು ನಂತರ ದೇವಸ್ಥಾನಕ್ಕೆ ಹೋಗಿ ವಿಷ್ಣುವಿನ ದರ್ಶನವನ್ನು ಪಡೆದೆವು.
ದೇವಪ್ರಯಾಗ ನಂತರ ೩.೩೦ ಕ್ಕೆ ಊಟವನ್ನು ಮಾಡಿ ಎರಡು ಘಂಟೆ ತಡವಾಗಿ (೮ ಕ್ಕೆ) AULI ಬಿಡಾರವನ್ನು ತಲುಪಿದೆವು. ಕತ್ತಲಿನಲ್ಲೇ ದಾರಿಯನ್ನು ಹುಡುಕಿಕೊಂಡು ಬಿಡಾರವನ್ನು ತಲುಪಿದೆವು.
ಊಟದ ಡೇರೆಯಲ್ಲಿ ಚಾರಣದ ನಾಯಕ ಶ್ರೀಮಾನ್ ಕುಶಾಲ್ ಹಾಗೂ ಮಾರ್ಗದರ್ಶಕ ಶ್ರೀಮಾನ್ ದಿನೇಶ್ ಭಟ್ ರವರ ಪರಿಚಯದೊಂದಿಗೆ ಹಾಗೂ ಎಲ್ಲ ಚಾರಣಿಗರ ಪರಿಚಯದ ನಂತರ ರಾತ್ರೆಯ ಊಟವನ್ನು ಮುಗಿಸಿದೆವು. ನಮ್ಮ ತಂಡದಲ್ಲಿ ನಾನು ಹಾಗೂ ಶ್ರೀಮತಿ.ಸುಮಾ ರವರನ್ನು ಬಿಟ್ಟರೆ ಉಳಿದ ೭ ಮಂದಿಯೂ ಮೊದಲಿಗೆ ಚಾರಣಮಾಡಲು ಹಿಮಾಲಯದೆಡೆಗೆ ಬಂದಿದ್ದರು ಹಾಗೂ ಉತ್ಸಾಹ ಮತ್ತು ಕುತೂಹಲವುಳ್ಳವರಾಗಿದ್ದರು.
ದಿನೇಶ್ ಭಟ್ ನಾವುಗಳು ಚಾರಣದಲ್ಲಿ ನೋಡಬಹುದಾದ ಶಿಖರಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ನೀಡಿದರು. ಅದರಂತೆ ನಾವುಗಳು ವೀಕ್ಷಿಸಬಹುದಾದ ಶಿಖರಗಳೆಂದರೆ:
ಶಿಖರದ ಹೆಸರು ಎತ್ತರ
ನಂದಾದೇವಿ ೭೮೧೮ ಮೀ.

ದೂನಾಗಿರಿ              ೭೦೬೬ ಮೀ.
ಹಾತಿ ಪರ್ವತ           ೬೭೨೭ ಮೀ.
ಗೋಡಾ ಪಾರ್ವತ
ಕಾಮೆಟ್ ಪರ್ವತ       ೭೭೫೬ ಮೀ.
ಕಳಂಕ ೬೯೩೨ ಮೀ.
ಚೌಖಾoಬಾ ೧ ರಿಂದ ೪ - ೭೧೩೮ ಮೀ. (ಅತಿ ಎತ್ತರದ ಶಿಖರ)
ಚಾoಗ್ ಬಾಂಗ್ (ಹೊಳೆಯುವ ಪರ್ವತ) ೬೮೬೪ ಮೀ.
ನೀಲಕಾಂತ್ ೬೫೯೬ ಮೀ.
ಋಷಿಪಹಾಡ್ ೬೯೯೨ ಮೀ.
ಮೃಗತುನಿ ೬೫೬೫ ಮೀ.
ಬೆತ್ರತೋಳಿ
ತ್ರಿಶೂಲ್ ೭೨೧೦ ಮೀ.
ಭಾನುವಾರ ಬೆಳಗ್ಗೆ ೮.೩೦ಕ್ಕೆ ಚಾರಣವನ್ನು ಪ್ರಾರಂಭಿಸಿದೆವು. ಮೊದಲಿಗೇ ತೀವ್ರ ಏರು ದಾರಿ ಹಾಗೂ ಮೆಟ್ಟಲುಗಳಿಂದ ಕೂಡಿದ ಹಾದಿ ನಮಗೆ ಎದುರಾಯಿತು. ಇದು ಕೆಳಗಿನಿಂದ ಮೇಲಕ್ಕೆ ಜನಗಳನ್ನು ಕರೆದೊಯ್ಯುವ CABLE CAR ನ ಎತ್ತರದ ಕಡೆಯ ನಿಲ್ದಾಣದವರೆಗೂ ಹತ್ತಬೇಕಿತ್ತು. ಅಲ್ಲಿ ಒಂದು ಗಾಜಿನ ಕೋಣೆ ನಮಗೆದುರಾಯಿತು. ಇಲ್ಲಿ ಎಲ್ಲರೂ ಸ್ವಲ್ಪ ಹೊತ್ತು ವಿಶ್ರಾoತಿಯನ್ನು ಪಡೆದು ಮತ್ತೆ ಹತ್ತ ತೊಡಗಿದೆವು. ಅರ್ಧ ಘಂಟೆಯ ನಂತರ ನಮಗೆ ಗೋಡ್ಸನ್ ಹುಲ್ಲುಗಾವಲು ಎದುರಾಯಿತು. ಇದಕ್ಕೆ ಮೊದಲು ನಾವು ಒಂದು ಕೃತಕ ಕೊಳವನ್ನು ವೀಕ್ಷಿಸಿದೆವು. ಇದರ ಹೆಸರು AULI ARTIFICIAL POND.
ಇದರಿಂದ ಹಿಮಪಾತ ಕಡಿಮೆ ಬಿದ್ದಾಗ ಕೃತಕ ಹಿಮವನ್ನು ಹೊರಗೆ ಚೆಲ್ಲುತ್ತಾರೆ. ಇದರಿಂದ ಪ್ರಯಾಣಿಕರು ಸುಲಭವಾಗಿ ಜಾರುವ ಅನುಭವವನ್ನು ಪಡೆಯುತ್ತಾರೆ ಎಂದು ನಮಗೆ ತಿಳಿದುಬಂದಿತು. ಇಲ್ಲಿಂದ ನಾವು ೨೦೦೦ ಅಡಿ ಎತ್ತರದ ಹಾದಿಯಲ್ಲಿ ಸುಮಾರು ಒಂದು ಘಂಟೆ ಹತ್ತಿದನಂತರ ದೇವಾದಾರು ವೃಕ್ಷದ ದಟ್ಟವಾದ ಕಾಡನ್ನು ಪ್ರವೇಶಿಸಿ ಕಾಡೊಳಗೆ ಒಂದು ಎತ್ತರದ ಪ್ರದೇಶದಲ್ಲಿರುವ ಸಣ್ಣದಾದ ಗುಡಿಯನ್ನು ತಲುಪಿದೆವು. ಈ ಗುಡಿಯಲ್ಲಿ ನಂದಾದೇವಿಯ ವಿಗ್ರಹವನ್ನು ನೋಡಿದೆವು. ಅಲ್ಲಿಯೇ ಸ್ವಲ್ಪ ಹೊತ್ತು ವಿಶ್ರಾoತಿಯನ್ನು ಪಡೆದೆವು. ಈ ಸಮಯದಲ್ಲಿ ನಾನು ದಿನೇಶ್ ರವರನ್ನು ರೂಪಕುಂಡದಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ನಂದಾದೇವಿಯ ಜಾತ್ರೆಯ ಬಗ್ಗೆ ಎಲ್ಲರಿಗೂ ವಿವರಿಸುವಂತೆ ವಿನಂತಿಸಿಕೊಂಡೆ. ದಿನೇಶ್ ವಿವರವಾಗಿ ಎಲ್ಲರಿಗೂ ತಿಳಿಸಿದನು. ಅಲ್ಲಿಂದ ಮಧ್ಯಾನ್ಹ ೧.೩೦ ಕ್ಕೆ ನಾವು ೧೦೫೦೦ ಅಡಿ ಎತ್ತರದ ಗೋಡ್ಸನ್ ಹುಲ್ಲುಗಾವಲಿನ ಶಿಬಿರವನ್ನು ತಲುಪಿದೆವು. GODSON MEADOWSಹಾಥಿ - ಘೋಡಾ ಪರ್ವತ ಶಿಖರಗಳು

ಮದ್ಯಾನ್ಹದ ಬಿಸಿ ಊಟದ ನಂತರ ಸ್ವಲ್ಪ ವಿಶ್ರಾoತಿಯನ್ನು ಪಡೆದು ಸಂಜೆಯ ವರೆಗೆ ಹುಲ್ಲುಗಾವಲಿನಲ್ಲಿ ಬಹಳ ದೂರದವರೆಗೆ ನಾನು ಹಾಗೂ ವೆಂಕಟ ಸುಬ್ಬಯ್ಯನೂ  ನಡೆದಾಡಿದೆವು. ಇಲ್ಲಿಂದ ನೇರವಾಗಿ ನಮಗೆ ಹಾತಿ ಗೋಡಾ ಪರ್ವತವು ಕಾಣಿಸುತ್ತಿತ್ತು. ಸ್ವಲ್ಪ ಹೊತ್ತಿಗೆ ಈ ಪರ್ವತವನ್ನು ಮೋಡಗಳು ಮರೆಮಾಡತೊಡಗಿದವು. ಹಾಗೆಯೇ ೪.೩೦ಕ್ಕೆ ಮಳೆಯೂ ಶುರುವಾಯಿತು. ನಾವುಗಳೆಲ್ಲರೂ ಡೇರೆಯೊಳಗೆ ನುಸುಳಿ ಮಳೆ ನಿಲ್ಲುವವರೆಗೂ ವಿಶ್ರಾoತಿ ಯನ್ನು ಪಡೆದೆವು.  ಅನಂತರ ೫ಕ್ಕೆ ಚಹಾ, ೬ಕ್ಕೆ ಖಾರವಾದ ಸೂಪ್ ನ್ನು ಕುಡಿದು ಕತ್ತಲಿನಲ್ಲಿ ೭ಕ್ಕೆ ರಾತ್ರೆಯ ಊಟವನ್ನು ಮಾಡಿ ಮಲಗಿದೆವು.     
ಬೆಳಗ್ಗೆ ಬೇಗನೆ ಎದ್ದು ಶುಭ್ರವಾದ ಆಕಾಶದಲ್ಲಿ ಮತ್ತೊಮ್ಮೆ ಹಾತಿ ಗೋಡಾ ಪರ್ವತವನ್ನು ವೀಕ್ಷಿಸಿ ಅಲ್ಲಿಂದ ನಮ್ಮ ಚಾರಣವನ್ನು ಚಿತ್ರಕಾಂತ ಕಾಡಿನೆಡೆಗೆ ಪ್ರಾರಂಭಮಾಡಿದೆವು. ಮೊದಲ ಅರ್ಧ ಘoಟೆ ಹುಲ್ಲುಗಾವಲಿನಲ್ಲಿ ಹತ್ತಬೇಕಿತ್ತು. ನಿಧಾನವಾಗಿ ನಡೆಯುತ್ತಾ ದಾರಿಯುದ್ದಕ್ಕೂ ದಿನೇಶ್ ಒಡನೆ ಮಾತನಾಡುತ್ತಾ ಹೋದೆವು. ಸ್ವಲ್ಪ ಸಮಯದ ನಂತರ ನಾವು KWANI ಹುಲ್ಲುಗಾವಲನ್ನು ಪ್ರವೇಶಿಸಿದೆವು. ಹಲವಾರು ಗುಡ್ಡಗಳನ್ನು ಸುತ್ತಿ ಬಳಸುತ್ತಾ ತೀವ್ರವಾದ ಹಾಗೂ ಕಡಿದಾದ ಹಾದಿಯಲ್ಲಿ ನಡೆಯತೊಡಗಿದೆವು. ಆದರೆ ಅಷ್ಟೇನೂ ಆಯಾಸವಾಗಲಿಲ್ಲ. ಸುಮಾರು ನಾಲ್ಕು ಘಂಟೆ ನಡೆದನಂತರ ಒಂದು ಕಡೆ ಮೇಲಿನಿಂದ ಹರಿದುಬರುತ್ತಿರುವ ನೀರಿನ ತೊರೆಯ ಜಾಗವನ್ನು ತಲುಪಿದೆವು. ಈ ಜಾಗದಲ್ಲಿ ಸುಮಾರು ಅರ್ಧ ಘಂಟೆ ವಿಶ್ರಾoತಿ ಪಡೆದು ಮುಂದುವರೆಯಬೇಕೆನ್ನುವಷ್ಟರಲ್ಲಿ ಕುದುರೆಯ ಮೇಲೆ ನಮ್ಮ ಅಡಿಗೆ ಸಾಮಾನುಗಳನ್ನು ಸಾಗಿಸುತ್ತಿದ್ದವರಲ್ಲಿ ಒಬ್ಬನು ಚಿತ್ರಕಾಂತ ಕಾಡಿನ ನಂತರದ ಸಮತಟ್ಟಾದ ಜಾಗದ ಬಳಿ ನೀರಿನ ಸೌಕರ್ಯವಿಲ್ಲವೆಂದು ತಿಳಿಸಿದನು. ನಮ್ಮ ಟ್ರೆಕ್ ನಾಯಕ ಕುಶಾಲ್ ಸ್ವಲ್ಪ ಸಮಯ ಚಿoತಾಕ್ರಾoತನಾದನು. ನಾವೆಲ್ಲರೂ ಅವನಿಗೆ ಸಮಾಧಾನವನ್ನು ಹೇಳಿ ಅಲ್ಲೇ ಹೋಗಿ ತಂಗೋಣವೆoದೂ ಹಾಗೂ ಕಡಿಮೆ ನೀರನ್ನು ಉಪಯೋಗಿಸೋಣವೆಂದು ತಿಳಿಸಿದೆವು. ಆದರೆ ನಮಗೆ ಆ ಪರಿಸ್ಥಿತಿಯು ಬರಲಿಲ್ಲ, ಏಕೆಂದರೆ ನಮ್ಮ ಡೇರೆಯ ಹತ್ತಿರದಲ್ಲೇ ನೀರಿನ ಸೌಕರ್ಯವಿರುವುದು ಪತ್ತೆಯಾಯಿತು. ಸುಮಾರು ೭.೫ ಕಿ.ಮೀ ನಡೆದಮೇಲೆ ನಾವು
ಖುಲ್ಲಾರ ಪ್ರದೇಶಕ್ಕೆ ಹೋಗದೇ ಚಿತ್ರಾಕಾಂತ ಕಾಡಿನ ಹೊರಗಿನ ಹುಲ್ಲುಗಾವಲಿನಲ್ಲಿ ನಮ್ಮ ಡೇರೆಗಳನ್ನು ಮಧ್ಯಾನ್ಹ ೨.೦೦ ಘಂಟೆಗೆ ಸ್ಥಾಪಿಸಿದೆವು. ಏಕೆಂದರೆ ಖುಲ್ಲಾರ ಪ್ರದೇಶದಲ್ಲಿ ನೀರಿನ ಸೌಕರ್ಯವಿರಲಿಲ್ಲ ಹಾಗೂ ಅಲ್ಲಿಂದ ಪರ್ವತ ಶಿಖರಗಳನ್ನು ವೀಕ್ಷಿಸುವುದು ಅನುಕೂಲಕರವಾಗಿರಲಿಲ್ಲ.
ನನ್ನ ಅನುಭವದ ಪ್ರಕಾರ ಚಿತ್ರಕಾಂತ ಹುಲ್ಲುಗಾವಲು ಅಷ್ಟೇನೂ ಸುಂದರವಾಗಿರಲಿಲ್ಲ. ಅದನ್ನು ಹುಲ್ಲುಗಾವಲು ಎಂದು ಕರೆಯುವ ಹಾಗಿರಲಿಲ್ಲ. ಆದರೂ ಅಲ್ಲಿಂದ ೧೮೦ ಡಿಗ್ರಿ ಸುತ್ತಲೂ ಪಾರ್ವತಗಳ ವೀಕ್ಷಣೆಯು ಅತ್ಯದ್ಭುತವಾಗಿತ್ತು. ಮಧ್ಯಾನ್ಹದ ಊಟದ ನಂತರ ಸ್ವಲ್ಪಹೊತ್ತು ಹುಲ್ಲುಗಾವಲಿನಲ್ಲಿ ಸುತ್ತಾಡಿ ಡೇರೆಯೊಳಗೆ ವಿಶ್ರಾoತಿಯನ್ನು ಪಡೆದೆವು. ಸಂಜೆಗೆ ಸ್ವಲ್ಪ ಚಳಿಯು ಶುರುವಾಯಿತು. ರಾತ್ರೆ ಊಟದ ನಂತರ ಎಲ್ಲರೂ ಮಲಗಿದೆವು. ಬೆಳಗಿನ ಝಾವ ಸುಮಾರು ೪.೦೦ ಘಂಟೆಗೆ ಮಳೆಯೂ ಶುರುವಾಗಿ ಬೆಳಗ್ಗೆ ೮.೦೦ ರ ವರೆಗೂ ಬರುತ್ತಲೇ ಇತ್ತು. ನಂತರ ಮಳೆ ನಿಂತಿತು. ೮.೪೫ ಕ್ಕೆ ನಾವುಗಳೆಲ್ಲರೂ ಕುವರಿ ಟಾಪ್ ಎಡೆಗೆ ಹೊರಟೆವು. ಹಾದಿಯು ಸ್ವಲ್ಪ ಏರಿಳಿತಗಳಿಂದ ಕೂಡಿದ್ದರೂ ಯಾರಿಗೂ ಅಷ್ಟೇನೂ ಆಯಾಸವಾಗಲಿಲ್ಲ. ೧೧.೧೫ ಕ್ಕೆ ಕುವರಿ ಟಾಪ್ ಪ್ರದೇಶವನ್ನು ತಲುಪಿದೆವು. ಇದಕ್ಕೆ ಮೊದಲು ನಾವು ಬಾವುಟ ಗುಡ್ಡವನ್ನು ತಲುಪಿ ಅಲ್ಲಿ ಸ್ವಲ್ಪ ಹೊತ್ತು ವಿಶ್ರಾoತಿಯನ್ನು ಪಡೆದು ನಂತರ ಮುಂದುವರೆದೆವು. ಕುವರಿ ಟಾಪ್ ಪ್ರದೇಶವು ಕುವರಿ ಪಾಸ್ ನಲ್ಲಿನ ಅತಿ ಎತ್ತರದ ಪ್ರದೇಶ ಹಾಗೂ ಇದು ಸುಮಾರು ೧೩೦೦೦ ಅಡಿ ಎತ್ತರದ ಪ್ರದೇಶ. ಇಲ್ಲಿಂದ ಕುವರಿ ಪಾಸ್ ಕಡೆಗೆ ಹೋಗಬೇಕಾದರೆ ಮತ್ತೆ ಒಂದು ಘಂಟೆ ನಡೆಯಬೇಕಿತ್ತು. ನಾವು ಬೆಳಗ್ಗೆ ೫.೩೦ ಕ್ಕೆ ನಮ್ಮ ಡೇರೆಯಿಂದ ಹೊರಟಿದ್ದರೆ ಕುವರಿ ಪಾಸ್ ಕಡೆಗೆ ಹೋಗಿ ಬರಬಹುದಾಗಿತ್ತು. ಆದರೆ ನಾವು ಸುಮಾರು ೩.೦೦ ಘಂಟೆ ತಡವಾಗಿ ಹೊರಟಿದ್ದರಿಂದ ಕುವರಿ ಪಾಸ್ ಕಡೆಗೆ ಹೋದರೆ ಮರಳಿ ನಮ್ಮ ಬಿಡಾರಕ್ಕೆ ತಲುಪುವುದು ಬಹಳ ತಡವಾಗಬಹುದು ಹಾಗೂ ಪರ್ವತ ಪ್ರದೇಶದಲ್ಲಿ ಸಾಮಾನ್ಯವಾಗಿ ಮಧ್ಯಾನ್ಹ ೨.೦೦ ಘಂಟೆಯಾ ನಂತರ ಮಳೆಬರುವುದು ವಾಡಿಕೆಯಾದ್ದರಿಂದ ನಮ್ಮ ಟ್ರೆಕ್ ನಾಯಕ ಕುಶಾಲ್ ಮತ್ತು ಮಾರ್ಗದರ್ಶಕ ದಿನೇಶ್ ಕುವರಿ ಪಾಸ್ ಕಡೆಗೆ ಹೋಗುವುದು ಬೇಡವೆಂದು ನಮಗೆ ತಿಳಿಸಿ ನಮ್ಮ ಒಪ್ಪಿಗೆಯ ನಂತರ ಡೇರೆಕಡೆಗೆ ಮರಳಲು ಸೂಚಿಸಿದರು.
ಕುವರಿ ಟಾಪ್ ನಿಂದ ಮರಳುವ ಮೊದಲು ದಿನೇಶ್ ಎಲ್ಲರಿಗೂ ಮತ್ತೊಮ್ಮೆ ವಿವರವಾಗಿ ಎಲ್ಲ ಹಿಮಪರ್ವತದ ಶಿಖರಗಳ ಹೆಸರುಗಳನ್ನು ತಿಳಿಸಿ, ಹಾಗೂ ಕುವರಿ ಪಾಸ್ ಶ್ರೇಣಿಯ ಬಗ್ಗೆ ವಿವರಗಳನ್ನು ನೀಡಿದರು. ಅಲ್ಲಿಂದ ರೂಪಕುಂಡದೆಡೆಗೆ ಹೋಗುವ ಚಾರಣ ಹಾದಿಯನ್ನೂ ನಮಗೆ ತೋರಿಸಿದರು. ಆ ಹಾದಿಯಲ್ಲಿ ಹಲವಾರು ಚಾರಣಿಗರು ರೂಪಕುಂಡದೆಡೆಗೆ ಹೋಗುತ್ತಿದ್ದದ್ದನ್ನೂ ಕೂಡಾ ನೋಡಿದೆವು. ನಂತರ ನಾವು ಯಾವುದೇ ತೊಂದರೆ ಇಲ್ಲದೇ ಬಂದ ಹಾದಿಯಲ್ಲೇ ನಡೆದು ೨.೧೫ ಕ್ಕೆ ನಮ್ಮ ಬಿಡಾರಕ್ಕೆ ಮರಳಿದೆವು. ಊಟವಾದ ಸ್ವಲ್ಪ ಹೊತ್ತಿನಲ್ಲೇ ಮಳೆ ಶುರುವಾಯಿತು. ಎಲ್ಲರೂ ಬಿಡಾರದೊಳಗೆ ತೂರಿಕೊಂಡು ಹರಟೆ ಹೊಡೆಯತೊಡಗಿದೆವು. ಸಂಜೆ ೭.೦೦ ಘಂಟೆಯ ವರೆಗೂ ಮಳೆ ಬರುತ್ತಲೇ ಇದ್ದದ್ದರಿಂದ ನಾವುಗಳು ಚಹಾವನ್ನು ಕುಡಿಯಲು ಹೊರಬರಲಿಲ್ಲ. ನಂತರದ ಸೂಪನ್ನು ನಮ್ಮ ಟೆಂಟ್ ಬಳಿಯೇ ನೀಡಿದರು. ಮಳೆ ನಿಂತಮೇಲೆ ರಾತ್ರೆಯ ಊಟವನ್ನು ಮುಗಿಸಿ ಎಲ್ಲರೂ ಮಲಗಿದೆವು.
ಮಾರನೇ ದಿನ ಬೆಳಗ್ಗೆ ಶುಭ್ರ ಆಕಾಶದೊಡನೆ ಬೆಳಗಿನ ಸೂರ್ಯೋದಯದ ಮೊದಲ ಕಿರಣಗಳು ದೂರದ ಹಿಮಪರ್ವತದ ಶಿಖರದ ಮೇಲೆ ಬಿದ್ದು ಬಂಗಾರದ ಬಣ್ಣವನ್ನು ವೀಕ್ಷಿಸಿ ಎಲ್ಲರೂ ಅತ್ಯಂತ ಸಂತೋಷಪಟ್ಟೆವು. ಕಟ್ಟ ಕಡೆಯದಾಗಿ ಮತ್ತೊಮ್ಮೆ ಎಲ್ಲ ಶಿಖರಗಳನ್ನೂ ದಿನೇಶ್ ಭಟ್ ನ ಸಹಾಯದಿಂದ ಗುರುತಿಸಿ ತೃಪ್ತಿಯನ್ನು ಹೊಂದಿದೆವು.
ಕೊನೆಯ ದಿನದ ಚಾರಣವು ಚಿತ್ರಕಾಂತ ಬಿಡಾರದಿಂದ ಧಾಕ್ ಹಳ್ಳಿಯೆಡೆಗೆ ೧೦ ಕಿ.ಮೀ ದೂರದ ತೀವ್ರ ಇಳಿತದ್ದಾಗಿತ್ತು. ಬೆಳಗ್ಗೆ ೯.೦೦ ಕ್ಕೆ ಹೊರಟು ಮಧ್ಯಾನ್ಹ ೨.೦೦ ಕ್ಕೆ ಧಾಕ್ ಪ್ರದೇಶವನ್ನು ತಲುಪಿದೆವು. ಮೊದಲಿಗೆ ಹಾದಿಯು ಅರಣ್ಯದೊಳಗೆ ಮಣ್ಣಿನಿಂದ ಕೂಡಿದ್ದಾಗಿತ್ತು. ದಿನೇಶ್ ಅರಣ್ಯದೊಳಗಿನ ಮರಗಿಡಗಳ ಪರಿಚಯವನ್ನು ಮಾಡಿಕೊಡುತ್ತಾ ನಮ್ಮ ಜೊತೆ ನಡೆಯುತ್ತಿದ್ದರು. ಸುಮಾರು ಎರಡು ಘಂಟೆಯ ತೀವ್ರ ಇಳಿಮುಖದಿಂದ ಕುಡಿದ ಹಾದಿಯನ್ನು ಕ್ರಮಿಸಿದ ನಂತರ ಒಂದು ಸಮತಟ್ಟಾದ ಹುಲ್ಲುಗಾವಲನ್ನು ಪ್ರವೇಶಿಸಿ ಅಲ್ಲಿಯೇ ೩೦ ನಿಮಿಷ ವಿಶ್ರಾoತಿಯನ್ನು ಪಡೆದೆವು.
ನಂತರದ ಹಾದಿಯು ಕಲ್ಲಿನಿಂದ ಕೂಡಿದ ಇಳಿಜಾರಿನದಾಗಿತ್ತು. ಇದೇ ಹಾದಿಯಲ್ಲಿ ಬಹು ದೂರ ನಡೆದನಂತರ ಒಂದು ಹಳ್ಳಿಯನ್ನು ಪ್ರವೇಶಿಸಿದೆವು. ಅಲ್ಲಿಂದ ಹಲಾವಾರು ತೋಟದೊಳಗಿನ ಅತಿ ಸಣ್ಣದಾದ ಹಾದಿಯಲ್ಲಿ ಬಹಳ ಹೊತ್ತು ನಡೆದು ಸುಸ್ತಾಗಿ ಒಂದು ನೀರಿನ ತೊರೆಯ ಬಳಿ ವಿಶ್ರಾoತಿಯನ್ನು ಪಡೆದೆವು. ಅಷ್ಟುಹೊತ್ತಿಗೆ ನಮ್ಮ ಕುದುರೆಗಳು ನಮ್ಮ ಮುಂದೆ ಹಾದುಹೋದವು. ನಾನು ಅದರ ಹಿಂದೆಯೇ ಹೊರಟೆ, ಉಳಿದವರು ಇನ್ನೂ ಅಲ್ಲೇ ವಿಶ್ರಾoತಿಯನ್ನು ಪಡೆಯುತ್ತಿದ್ದರು. ಬಹಳ ದೂರದವರೆಗೂ ಕಲ್ಲಿನಿಂದ ಕೂಡಿದ ಹಾಗೂ ಹಲವಾರು ಕಡೆ ಮೆಟ್ಟಲುಗಳನ್ನು ಇಳಿಯುತ್ತಾ ನಡೆಯಬೇಕಿತ್ತು. ಹೀಗೆ ನಡೆಯುತ್ತಾ ರಸ್ತೆಯು ಮುಗಿಯುವವರೆಗೂ ಹೋದೆ. ನನ್ನ ಜೊತೆ ಸತ್ಯ ಹಾಗೂ ಓಂಕಾರ ಕೂಡಾ ಇದ್ದರು. ರಸ್ತೆಯ ಬಲಗಡೆಗೆ ಕೆಳಗೆ ಇರುವ ಮತ್ತೊಂದು ರಸ್ತೆಗೆ ಸಾಹಸದಿಂದ ಇಳಿದು ಅಲ್ಲಿಗೆ ಉಳಿದವರು ಬರುವವರೆಗೂ ಕುಳಿತಿದ್ದೆವು. ಮತ್ತೆ ಅಲ್ಲಿಂದ ಅರ್ಧ ಘಂಟೆ ನಡೆದು ವಾಹನವು ನಮ್ಮನ್ನು ಕರೆದೊಯ್ಯುವ ಸ್ಥಳವನ್ನು ತಲುಪಿದೆವು. ಈ ಮಧ್ಯೆ ವೆಂಕಟ ಸುಬ್ಬಯ್ಯನವರ ಶೂ ಅವರ ಕಾಲನ್ನು ಕಚ್ಚಿ ಮುಂದೆ ನಡೆಯಲಾಗದೇ ಹಾಗೂ ಅವರ ಚಪ್ಪಲಿಯೂ ಹಿಂದಿನ ದಿನವೇ ಕಿತ್ತು ಹೋಗಿದ್ದರಿಂದ ದಿನೇಶನ ಚಪ್ಪಲಿಯನ್ನು ಧರಿಸಿ ಬಹಳ ದೂರ ನಡೆದೂ ನಡೆದೂ ಸುಸ್ತಾಗಿ ಬಂದರು. ಅಲ್ಲಿಂದ ಅರ್ಧ ಘಂಟೆಯ ೧೨ ಕಿ.ಮೀ ದೂರದ ಪ್ರಯಾಣದ ನಂತರ ಜ್ಯೋರ್ತಿಮಠ ವನ್ನು ತಲುಪಿ ಅಲ್ಲಿನ ಕಾಮೆಟ್ ಹೋಟೆಲನ್ನು ಸೇರಿದೆವು.
ಅಲ್ಲಿಗೆ ನಮ್ಮ ಕುವರಿ ಪಾಸ್ ಚಾರಣವು ಮುಗಿದಂತಾಯಿತು. ಹೋಟೆಲಿನಲ್ಲಿ ನಮ್ಮ ಕೋಣೆಯನ್ನು ಪ್ರವೇಶಿಸಿ, ಸ್ನಾನವನ್ನು ಮಾಡಿ ನಾನು ಹಾಗೂ ವೆಂಕಟ್ ಬದರಿ ಕ್ಷೇತ್ರಕ್ಕೆ ಹೋಗಲು ತೀರ್ಮಾನಿಸಿ ಒಂದು ವಾಹನವನ್ನು ಗೊತ್ತುಮಾಡಿಕೊಂಡು ಶ್ರೀಮತಿ ಸುಮಾರೂ ಕೂಡಾ ಬದರಿಗೆ ಬರಲು ಇಚ್ಛಿಸಿದ್ದರಿಂದ ಅವರನ್ನೂ ಕರೆದುಕೊಂಡು ಬದರಿಗೆ ಹೋಗಿ ಅವರನ್ನು ಅಲ್ಲಿ ಬಿಟ್ಟು ಬದರೀನಾರಾಯಣನ ದರ್ಶನವನ್ನು ಎರಡು ಬಾರಿ ಮಾಡಿ ಧನ್ಯರಾಗಿ ಮರಳಿ ಜೋತಿರ್ಮಠವನ್ನು ರಾತ್ರೆ ೮.೩೦ಕ್ಕೆ ತಲುಪಿದೆವು. ಮಾರನೇ ದಿನ ಅಲ್ಲಿಂದ ಹೊರಟು ಸಂಜೆಯವೇಳೆಗೆ ಹರಿದ್ವಾರವನ್ನು ತಲುಪಿ ಅದೇ ದಿನ ರಾತ್ರೆ ೧.೦ಘಂಟೆಗೆ ಹೊರಡುವ ರೈಲಿನಲ್ಲಿ ದೆಹಲಿಗೆ ತಲುಪಿ ಅಲ್ಲಿಂದ ಬೆಳಗ್ಗೆ ೯.೩೦ ಕ್ಕೆ ಹೊರಡುವ ವಿಮಾನದಲ್ಲಿ ಬೆಂಗಳೂರಿಗೆ ಮಧ್ಯಾನ್ಹ ೧೨.೩೦ ಕ್ಕೆ ಬೆಂಗಳೂರನ್ನು ತಲುಪಿದೆವು.
ನನ್ನ ಮುಂದಿನ ಚಾರಣವು ಸಿಕ್ಕಿಂನಲ್ಲಿನ ಗೋಯ್ಚಲದೆಡೆಗೆ. ಇದು ನವೇಂಬರ ೪ ರಿಂದ ೧೩ ರ ವರೆಗೆ.
ಗುರುಪ್ರಸಾದ್ ಹಾಲ್ಕುರಿಕೆ
7th NOVEMBER 2016

Comments
Post a Comment